ಬೇರುಗಳ ಕುರಿತಾದ ಜ್ಞಾನ - ಸೂಕ್ಷ್ಮ ವ್ಯವಸ್ಥೆ
ನಮ್ಮ ಆಂತರ್ಯದ/ಅಂತರಂಗದ ಪ್ರಾಚೀನ ವಿಜ್ಞಾನ
ಯೋಗವನ್ನು ಕರಗತ ಮಾಡಿಕೊಳ್ಳುವ ಪ್ರಮುಖ ಅಂಶವೆಂದರೆ ಸೂಕ್ಷ್ಮ ವ್ಯವಸ್ಥೆಯ ಸಂಪೂರ್ಣ ಜ್ಞಾನವನ್ನು ಹೊಂದಿರುವುದು, ಇದು ನಮ್ಮ ಪ್ರಜ್ಞೆಯ ಆಂತರಿಕ ವಿಕಾಸವನ್ನು ಅನುಭವಿಸಲು ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಾಚೀನ ಭಾರತೀಯ ವೈದಿಕ ಗ್ರಂಥಗಳು ಸೂಕ್ಷ್ಮ ವ್ಯವಸ್ಥೆಯನ್ನು ನಾಡಿಗಳಿಂದ (ಸಂಸ್ಕೃತದಲ್ಲಿ ಚಾನಲ್ ಅಥವಾ ವಾಹಿನಿಗಳಿಂದ ಎಂದರ್ಥ) ಒಳಗೊಂಡಿವೆ ಎಂದು ವಿವರಿಸುತ್ತವೆ. ನದಿಗಳ ಮೂಲಕ ಹರಿಯುವ ನೀರಿನಂತೆ, ನಾಡಿಗಳು(opens in new tab) ನಮ್ಮ ಅಸ್ತಿತ್ವದಲ್ಲಿ ಸೂಕ್ಷ್ಮ ಶಕ್ತಿಗಳ ಹರಿವನ್ನು ಸುಗಮಗೊಳಿಸುತ್ತವೆ. ಈ ವ್ಯವಸ್ಥೆಯು ಚಕ್ರಗಳು(opens in new tab) (ಸಂಸ್ಕೃತದಲ್ಲಿ ಚಕ್ರಗಳಂತೆ ತಿರುಗುವ ಸೂಕ್ಷ್ಮ ಶಕ್ತಿ ಕೇಂದ್ರ ಎಂದರ್ಥ) ಮತ್ತು ಕುಂಡಲಿನಿ(opens in new tab) (ನಮ್ಮ ಸ್ಯಾಕ್ರಮ್ ಮೂಳೆಯಲ್ಲಿ( ಬೆನ್ನುಹುರಿಯ ಕೊನೆಯ ಬಾಗ) ಪ್ರತಿಫಲಿಸುವ ವಿಕಾಸದ ಉಳಿದ ಶಕ್ತಿಯಾದ ಸುರುಳಿಯಾಕಾರದಲ್ಲಿ ಅಡಕವಾಗಿರುವ ಶಕ್ತಿ ಎಂದರ್ಥ) ಸಹ ಒಳಗೊಂಡಿದೆ. ನಮ್ಮ ಸೂಕ್ಷ್ಮ ದೇಹವು ಮೂರು ಮುಖ್ಯ ನಾಡಿಗಳಾದ ಇಡಾ, ಪಿಂಗಲಾ ಮತ್ತು ಸುಶುಮ್ನಾಗಳ ಚೌಕಟ್ಟಿನೊಳಗೆ ಸಾವಿರಾರು ನಾಡಿಗಳು ಮತ್ತು ಏಳು ಚಕ್ರಗಳಾದ ಮೂಲಾಧಾರ(opens in new tab), ಸ್ವಾಧಿಷ್ಠಾನ(opens in new tab), ನಾಭಿ(opens in new tab), ಅನಾಹತ(opens in new tab), ವಿಶುದ್ಧಿ(opens in new tab), ಆಜ್ಞಾ(opens in new tab) ಮತ್ತು ಸಹಸ್ರಾರ(opens in new tab) ಎಂಬ ಮುಖ್ಯ ಚಕ್ರ ಒಳಗೊಂಡಿದೆ.
ಆತ್ಮ(opens in new tab), ಪರಮಾತ್ಮನ ಶಾಶ್ವತ ಚೈತನ್ಯವು ನಮ್ಮ ಹೃದಯದಲ್ಲಿ ಪ್ರತಿಫಲಿಸುತ್ತದೆ.
ನಮ್ಮ ಇಂದ್ರಿಯಗಳು ಮತ್ತು ಮೋಟಾರ್/ಸ್ವಯಂಚಾಲಿತ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ನರಗಳು ಮತ್ತು ನರ ತಂತು /ಗಂಟಗಳ (ಪ್ಲೆಕ್ಸಸ್ಗಳ) ಸಂಕೀರ್ಣ ಜಾಲವನ್ನು ನಾವು ಹೊಂದಿರುವಂತೆಯೇ, ಪ್ರತಿಯೊಬ್ಬ ಮನುಷ್ಯನಲ್ಲೂ ಸಿಂಪಥೇಟಿಕ್ ಮತ್ತು ಪ್ಯಾರಾಸಿಂಪಥೆಟಿಕ್ ನರಮಂಡಲಗಳೊಂದಿಗೆ ಚೆನ್ನಾಗಿ ನಕ್ಷೆ ಮಾಡುವ ಸಹಜ ಸೂಕ್ಷ್ಮ ವ್ಯವಸ್ಥೆ ಇರುತ್ತದೆ. ನಮ್ಮ ದೇಹ ಮತ್ತು ಮೆದುಳಿನಲ್ಲಿರುವ ನರಮಂಡಲದೊಂದಿಗೆ ಚಾನಲ್ಗಳು (ನಾಡಿಗಳು) ಮತ್ತು ಶಕ್ತಿ ಕೇಂದ್ರಗಳನ್ನು (ಚಕ್ರಗಳು) ಒಳಗೊಂಡಿರುವ ನಮ್ಮ ಸೂಕ್ಷ್ಮ ವ್ಯವಸ್ಥೆಯ ಸಂಕೀರ್ಣ ಪರಸ್ಪರ ಕ್ರಿಯೆಯು ನಮ್ಮ ದೈಹಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಮಜಲುಗಳನ್ನು ನೋಡಿಕೊಳ್ಳುತ್ತದೆ. ಸೂಕ್ಷ್ಮ ವ್ಯವಸ್ಥೆಯನ್ನು ಕಂಪ್ಯೂಟರ್ನಲ್ಲಿರುವ ಸಾಫ್ಟ್ವೇರ್ನೊಂದಿಗೆ ಹೋಲಿಸಬಹುದು.
ಮಾನವ ಸೂಕ್ಷ್ಮ ವ್ಯವಸ್ಥೆಯ ಜ್ಞಾನವು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ಭಾರತೀಯ ಧರ್ಮಗ್ರಂಥಗಳು ಶಿವನು ಸಪ್ತಋಷಿಗಳಿಗೆ (ಏಳು ಋಷಿಗಳು) ಈ ಜ್ಞಾನವನ್ನು ತಿಳಿಸಿದ ಮೊದಲ ಆದಿಯೋಗಿ (ಆದಿ ಯೋಗಿ) ಎಂದು ಬಹಿರಂಗಪಡಿಸುತ್ತವೆ. ಈ ಏಳು ಋಷಿಗಳು ಈ ಯೋಗ ವಿಜ್ಞಾನವನ್ನು ಪ್ರಪಂಚದ ವಿವಿಧ ಭಾಗಗಳಿಗೆ ಕೊಂಡೊಯ್ದರು. ಆದಾಗ್ಯೂ, ಯೋಗ ವ್ಯವಸ್ಥೆಯು ತನ್ನ ಪೂರ್ಣ ಅಭಿವ್ಯಕ್ತವನ್ನು ಕಂಡುಕೊಂಡದ್ದು ಭಾರತದಲ್ಲಿಯೇ.
ನಮ್ಮ ಸೂಕ್ಷ್ಮ ವ್ಯವಸ್ಥೆಯ ಬಗ್ಗೆ ಈ ಜ್ಞಾನವು ಭಾರತೀಯ ಯೋಗ ಸಂಪ್ರದಾಯಗಳಲ್ಲಿ ಚಿರಪರಿಚಿತವಾಗಿದ್ದರೂ, ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಆರಂಭಿಕ ಹಂತಗಳಿಂದಲೇ ಇಡೀ ಸೂಕ್ಷ್ಮ ವ್ಯವಸ್ಥೆಯ ಸಂಕೀರ್ಣ ಕಾರ್ಯವಿಧಾನ ಮತ್ತು ಅದು ಜೀವಂತ ದೇಹದಲ್ಲಿ ಹೇಗೆ ಸಹಬಾಳ್ವೆ ನಡೆಸುತ್ತದೆ ಎಂಬುದನ್ನು ಮೊದಲು ವಿವರಿಸಿದವರು ಶ್ರೀ ಮಾತಾಜಿ.
ಪ್ರಿಸ್ಮ್ ನಲ್ಲಿ ಬೆಳಕು ಬಾಗಿಸಾಗುವ ಸರಳ ಸಾದೃಶ್ಯವನ್ನು ಬಳಸಿಕೊಂಡು, ಶ್ರೀ ಮಾತಾಜಿ ಅವರು ಲಕ್ಷಾಂತರ ವರ್ಷಗಳಿಂದ ಸಮತಟ್ಟಾದ ರಚನೆಯಿಂದ ಪ್ರಿಸ್ಮಾಟಿಕ್ ರಚನೆಯಾಗಿ ವಿಕಸನಗೊಂಡಿರುವ ಮಾನವ ಮೆದುಳು, ಸಂಕೀರ್ಣ ಮಾನವ ನರಮಂಡಲದೊಳಗೆ ಪ್ರತಿಫಲಿಸುವ ಮತ್ತು ಮಿಶ್ರಣವಾಗುವ ಸೂಕ್ಷ್ಮ ಶಕ್ತಿಗಳ ಸಂಕೀರ್ಣ ವಾಸ್ತುಶಿಲ್ಪವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯು ನವಜಾತ ಶಿಶುಗಳ ಫಾಂಟನೆಲ್ ಮೂಳೆ ಪ್ರದೇಶದಿಂದ ಹೊರಹೊಮ್ಮುವ ತಂಪಾದ ತಂಗಾಳಿಯನ್ನು ಹೆಚ್ಚಾಗಿ ಅನುಭವಿಸಬಹುದು. ಶ್ರೀ ಮಾತಾಜಿ ಈ ವಿದ್ಯಮಾನವನ್ನು ನಮ್ಮ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ದೇವರ ಪ್ರೀತಿಯ ಸರ್ವವ್ಯಾಪಿ ಶಕ್ತಿಯ ಚಟುವಟಿಕೆಯ ಸೂಚನೆಯಾಗಿ ವಿವರಿಸಿದರು, ಇದನ್ನು ಅವರು ಪರಮಚೈತನ್ಯ(opens in new tab) ಎಂದು ಕರೆದರು. ಆಗಾಗ್ಗೆ ಶಿಶುಗಳು ನಿರ್ದಿಷ್ಟ ಬೆರಳನ್ನು ಹೀರುವುದನ್ನು ಕಾಣಬಹುದು, ಇದನ್ನು ಅರಿತುಕೊಂಡ ಆತ್ಮಗಳು ನಮ್ಮೊಳಗಿನ ನಿರ್ದಿಷ್ಟ ಚಕ್ರದ ಮೇಲಿನ ಅಡೆತಡೆಗಳಿಗೆ ಸಂಬಂಧಿಸಿದಂತೆ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಂತರ, ಕಪಾಲದ ಮೂಳೆಗಳ ಕ್ಯಾಲ್ಸಿಫಿಕೇಶನ್ ಅಥವಾ ಸುಣ್ಣದ ಮೇಲ್ಪಧರದಿಂದಾಗಿ ಮತ್ತು ಮಾನವ ಅಹಂ ಮತ್ತು ಸ್ವಯಂ ನಿರ್ಮಿತ ಚೌಕಟ್ಟುಗಳಿಂದಾಗಿ (ಕಂಡೀಷನಿಂಗ್) ಬೆಳವಣಿಗೆಯ ಮೂಲಕ, ಈ ಸೂಕ್ಷ್ಮ ಅರಿವು ಕಡಿಮೆಯಾಗುತ್ತದೆ ಮತ್ತು ನಾವು ನಮ್ಮ ಸುತ್ತಲಿನ ಸ್ಥೂಲ ಪ್ರಪಂಚದ ಬಗ್ಗೆ ಹೆಚ್ಚು ಜಾಗೃತರಾಗುತ್ತೇವೆ ಮತ್ತು ಗುರುತಿಸಿಕೊಳ್ಳುತ್ತೇವೆ.
ಆತ್ಮಸಾಕ್ಷಾತ್ಕಾರ ಮತ್ತು ಧ್ಯಾನದ ಪ್ರಕ್ರಿಯೆಯ ಮೂಲಕ ನಾವು ನಮ್ಮ ಸೂಕ್ಷ್ಮ ಅಸ್ತಿತ್ವದಲ್ಲಿ ಈ ಆದಿಸ್ವರೂಪದ ಸಂಪರ್ಕವನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ.