ನಿಮ್ಮ ಸಾಮರ್ಥ್ಯವನ್ನು ಅನಾವರಣ ಗೊಳಿಸುವುದು

ನಿಮ್ಮ ಸಾಮರ್ಥ್ಯವನ್ನು ಅನಾವರಣ ಗೊಳಿಸುವುದು

ಸ್ವಯಂ ಜ್ಞಾನದ ಮೂಲಕ

ಒಬ್ಬ ವ್ಯಕ್ತಿಗೆ ಸಬಲೀಕರಣ ಎಂದರೆ ತನ್ನ ಜೀವನದ ಮೇಲೆ ಹೆಚ್ಚುತ್ತಿರುವ ನಿಯಂತ್ರಣ, ಹೆಚ್ಚಿನ ಶಕ್ತಿ ಅಥವಾ ತನ್ನ ಸಾಮರ್ಥ್ಯಗಳಲ್ಲಿ ಹೆಚ್ಚಿದ ವಿಶ್ವಾಸವನ್ನು ಪಡೆಯುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದಾಗಿದೆ , ಶ್ರೀ ಮಾತಾಜಿ ಅಭಿವೃದ್ಧಿಪಡಿಸಿದ ವಿಧಾನವು ಸ್ವಯಂ-ಸಬಲೀಕರಣದ ಅಂತಿಮ ಸಾಧನವಾಗಿದ್ದು, ಜನರು ತಮ್ಮೊಳಗಿನ ಅಸಾಧಾರಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅನುವು ಮಾಡಿಕೊಡುತ್ತದೆ, ಅದು ಒಮ್ಮೆ ಜಾಗೃತಗೊಂಡು ನಿಜವಾದ ರೂಪಾಂತರವನ್ನು ತರುತ್ತದೆ.

ಇದೆಲ್ಲವೂ ನಿಮ್ಮೊಳಗೆ ಅಂತರ್ಗತವಾಗಿದೆ. ಹೂವುಗಳು ಹಣ್ಣುಗಳಾಗುವಂತೆ ಅದು ಕಾರ್ಯರೂಪಕ್ಕೆ ಬರಲು ನಾವು ಅಣಿ ಮಾಡಿಕೊಡಬೇಕು

ಸಮಗ್ರ ಯೋಗಕ್ಷೇಮದಲ್ಲಿ ಒಟ್ಟಾರೆ ಸುಧಾರಣೆ ಮತ್ತು ಒತ್ತಡ ಮತ್ತು ನಕಾರಾತ್ಮಕ ಪರಿಣಾಮಗಳಿಗೆ ಹೆಚ್ಚಿನ ಪ್ರತಿರೋಧದಂತಹ ಪ್ರಯೋಜನಗಳ ಜೊತೆಗೆ, ಸಹಜ ಯೋಗ ಧ್ಯಾನದ ನಿರಂತರ ಅಭ್ಯಾಸವು ಸಾಧಕರಿಗೆ ಪ್ರಮುಖ ಮಾರ್ಗಗಳು ಮತ್ತು ಶಕ್ತಿ ಕೇಂದ್ರಗಳ ಜಾಲದಿಂದ ಕೂಡಿದ ತಮ್ಮದೇ ಆದ ಸೂಕ್ಷ್ಮ ದೇಹದ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಕ್ರಮೇಣ ಸಮತೋಲನ ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸಲು ಸರಳ ತಂತ್ರಗಳನ್ನು ಕರಗತ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಆತ್ಮಸಾಕ್ಷಾತ್ಕಾರವು ಸ್ವಯಂ ಜ್ಞಾನದಿಂದ ಪ್ರಾರಂಭವಾಗುತ್ತದೆ ಎಂದು ಶ್ರೀ ಮಾತಾಜಿ ಒತ್ತಿ ಹೇಳಿದ್ದಾರೆ . ಕೆಲವೇ ವಾರಗಳಲ್ಲಿ, ಸಹಜ ಯೋಗ ಧ್ಯಾನದ ಸಾಧಕರು ಕಂಪನದ ಅರಿವು ಎಂಬ ವಾಸ್ತವದ ಹೊಸ ಮತ್ತು ಸೂಕ್ಷ್ಮ ಅರಿವನ್ನು ಬೆಳೆಸಿಕೊಳ್ಳುತ್ತಾರೆ, ಇದು ಅವರ ಸುತ್ತಮುತ್ತಲಿನ ಶಕ್ತಿಯ ಗುಣಮಟ್ಟವನ್ನು ನಿರ್ಣಯಿಸಲು ಮತ್ತು ಅವರ ಸ್ವಂತ ಆಂತರಿಕ ಸ್ಥಿತಿಯನ್ನು ನಿರ್ಣಯಿಸಲು ಸಾಮರ್ಥ್ಯವನ್ನು ನೀಡುತ್ತದೆ. ಪ್ರಕೃತಿಯ ಅಂಶಗಳಾದ (ಗಾಳಿ, ನೀರು, ಬೆಂಕಿ, ವಾಯು,ಭೂಮಿ) ಬಳಕೆಯೊಂದಿಗೆ, ಶಕ್ತಿಯ ಮಟ್ಟದಲ್ಲಿನ ಹೆಚ್ಚುವರಿ ಅಥವಾ ಕೊರತೆಯನ್ನು ಸರಿಪಡಿಸಲು ಹಲವಾರು ತಂತ್ರಗಳು ಮತ್ತು ಚಿಕಿತ್ಸೆಗಳನ್ನು ಅನ್ವಯಿಸಬಹುದು, ಇವೆಲ್ಲವೂ ಕೈಗಳಲ್ಲಿ ಮತ್ತು ದೇಹದ ಕೆಲವು ಪ್ರದೇಶಗಳಲ್ಲಿ ಗ್ರಹಿಸಿದ ಸ್ಪಷ್ಟ ಸಂವೇದನೆಗಳನ್ನು ಆಧರಿಸಿವೆ.

ಬಹು ಮುಖ್ಯವಾಗಿ, ನಿಜವಾದ ಧ್ಯಾನದ ಅನುಭವವನ್ನು ಸಾಧಿಸುವುದು, ಇದನ್ನು ಆಲೋಚನೆಯಿಲ್ಲದ ಅರಿವು ಮತ್ತು ಆಂತರಿಕ ಶಾಂತಿಯ ಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ, ಇದು ಅತಿಯಾದ ಆಲೋಚನೆ ಅಥವಾ ಚಿಂತೆಯ ಪರಿಣಾಮವಾಗಿ ಹೆಚ್ಚಾಗಿ ಸೃಷ್ಟಿಯಾಗುವ ಅಸಮತೋಲನವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದು ಸ್ವಯಂ ನಿಯಂತ್ರಣ, ಗಮನಹರಿಸುವ ಸಾಮರ್ಥ್ಯ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.

ಹೆಚ್ಚು ಸಮಗ್ರ ಅಭ್ಯಾಸದೊಂದಿಗೆ, ಸೂಕ್ಷ್ಮ ಕಂಪನಗಳ ಅರಿವು ನಿರ್ಧಾರ ತೆಗೆದುಕೊಳ್ಳುವ ಸಾಧನವಾಗಬಹುದು, ಇದು ಪರಿಸ್ಥಿತಿಯ ಎಲ್ಲಾ ಅಂಶಗಳನ್ನು ಹೆಚ್ಚು ನಿಖರವಾಗಿ ನಿರ್ಣಯಿಸುವ ವೈದ್ಯರ ರೀತಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಧ್ಯಾನ ಮತ್ತು ಅದರ ಜೊತೆಗಿನ ಸಲಹೆಗಳು ಮತ್ತು ತಂತ್ರಗಳು ಕ್ರಮೇಣ ಸ್ವಯಂ ಪರಿವರ್ತನೆಯನ್ನು ತರಲು ಸಹಾಯ ಮಾಡುತ್ತದೆ ಮತ್ತು ಒಬ್ಬರ ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಸಾಮರ್ಥ್ಯವನ್ನು ನೀಡುತ್ತದೆ.

it_self-empowerment-through-meditation

ನೀವು ಈ ಮನಸ್ಸನ್ನು ಮೀರಿ ಹೋಗಬೇಕು, ಮತ್ತು ಇದಕ್ಕಾಗಿ ಅತ್ಯಂತ ಸಹಾಯಕವಾದ ವಿಷಯವೆಂದರೆ ಕುಂಡಲಿನಿ ಜಾಗೃತಿ, ಏಕೆಂದರೆ ಅದು ನಿಮ್ಮ ಲಿಂಬಿಕ್ ಪ್ರದೇಶದ ಮೂಲಕ ಹಾದುಹೋಗುತ್ತದೆ, ನಿಮ್ಮ ಫಾಂಟನೆಲ್ ಮೂಳೆ ಪ್ರದೇಶದ ಮೂಲಕ ಚೇಧನಗೊಂಡು ಮತ್ತು ನಿಮ್ಮನ್ನು ವಾಸ್ತವದ ಕ್ಷೇತ್ರಕ್ಕೆ ಕರೆದೊಯ್ಯುತ್ತದೆ ಮತ್ತು ಯೋಗವು ನಿಮ್ಮ ಮೆದುಳು,ಖಂಡಿತ ನಾನು ಹೇಳಲೇಬೇಕು,ಅದು ನಿಮ್ಮ ಹೃದಯ ಮತ್ತು ಈ ಸರ್ವವ್ಯಾಪಿ ಶಕ್ತಿಯ ನಡುವೆ ನಡೆಯುತ್ತದೆ.

ಸಹಜ ಯೋಗ ಧ್ಯಾನದ ಅಭ್ಯಾಸದ ಮೂಲಕ ನಿಜವಾದ ಸ್ವಯಂ-ಸಬಲೀಕರಣವನ್ನು ಸಾಧಿಸಲಾಗುತ್ತದೆ, ಇದು ನಮ್ಮನ್ನು ಸ್ವಯಂಚಾಲಿತವಾಗಿ ಸರ್ವವ್ಯಾಪಿ ಸಾರ್ವತ್ರಿಕ ಶಕ್ತಿಯ ಅತ್ಯುನ್ನತ ಮೂಲವಾದ ನಮ್ಮ ಹೃದಯದಲ್ಲಿ ವಾಸಿಸುವ ಶಾಶ್ವತ ಚೈತನ್ಯದೊಂದಿಗೆ ಸಂಪರ್ಕಿಸುತ್ತದೆ.

“ಪ್ರಬುದ್ಧ” ಎಂದರೆ ವ್ಯಕ್ತಿತ್ವ, ಪ್ರಬುದ್ಧ ವ್ಯಕ್ತಿತ್ವ, ಅದು ಮನಸ್ಸನ್ನು ಮೀರಿ ಹೋಗುತ್ತದೆ, ಏಕೆಂದರೆ ಅಂತಹ ವ್ಯಕ್ತಿ ಈ ಸರ್ವವ್ಯಾಪಿ ದೈವಿಕ ಪ್ರೀತಿಯ ಶಕ್ತಿಯೊಂದಿಗೆ ಸಂಪರ್ಕದಲ್ಲಿರುತ್ತಾನೆ . ಪರಿಣಾಮವಾಗಿ ಆ ವ್ಯಕ್ತಿಯಲ್ಲಿರುವ ಎಲ್ಲವೂ ಮಾರ್ಗದರ್ಶನ ಪಡೆಯುತ್ತದೆ, ಸಹಾಯ ಪಡೆಯುತ್ತದೆ… ಆ ಶಕ್ತಿಯು ತುಂಬಾ ಅಪರಿಮಿತವಾಗಿದ್ದು ಅದು ನಿಮ್ಮನ್ನು ನೋಡಿಕೊಳ್ಳುತ್ತದೆ, ಎಲ್ಲವನ್ನೂ ಸಂಘಟಿಸುತ್ತದೆ, ಯೋಚಿಸುತ್ತದೆ, ಅರ್ಥಮಾಡಿಕೊಳ್ಳುತ್ತದೆ, ಅದು ಬುದ್ಧಿವಂತಿಕೆ…”…”

SHARE PAGE