ಮಹಿಳೆಯರ ಕುರಿತಾದ ವಿಶ್ವಸಂಸ್ಥೆಯ 4ನೇ ವಿಶ್ವ ಸಮ್ಮೇಳನ
ಸೆಪ್ಟೆಂಬರ್ 1995 ರಲ್ಲಿ ನಡೆದ ಬೀಜಿಂಗ್ ಅಂತರ-ಪ್ರಾದೇಶಿಕ ದುಂಡು ಮೇಜಿನ ಸಭೆಯ ಆಯ್ದ ಭಾಗ.
ಸೆಪ್ಟೆಂಬರ್ 1995 ರಲ್ಲಿ ಬೀಜಿಂಗ್ ಚೀನಾದಲ್ಲಿ ನಡೆದ ನಾಲ್ಕನೇ ವಿಶ್ವ ಸಮ್ಮೇಳನವು ಮಹಿಳೆಯರು ಮತ್ತು ಲಿಂಗ ಸಮಾನತೆಯ ಕುರಿತಾದ ಹಿಂದಿನ ಮೂರು ಜಾಗತಿಕ ಸಮ್ಮೇಳನಗಳಲ್ಲಿ ತಲುಪಿದ ರಾಜಕೀಯ ಒಪ್ಪಂದಗಳ ಪರಾಕಾಷ್ಠೆಯಾಗಿತ್ತು. ಲಿಂಗ ಸಮಾನತೆಯ ಕುರಿತಾದ ಪ್ರಮುಖ ಜಾಗತಿಕ ನೀತಿ ದಾಖಲೆ ಎಂದು ಪರಿಗಣಿಸಲಾದ ಬೀಜಿಂಗ್‌ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ 189 ದೇಶಗಳು ಸರ್ವಾನುಮತದಿಂದ ಕಾರ್ಯಸೂಚಿಯನ್ನು ಅಂಗೀಕರಿಸಿದವು.
ಈ ಜಾಗತಿಕ ವೇದಿಕೆಯಲ್ಲಿ ಶ್ರೀ ಮಾತಾಜಿ ಅವರನ್ನು ಅತಿಥಿ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಮಹಿಳೆಯರ ಪಾತ್ರದ ಬಗ್ಗೆ ಅವರು ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುತ್ತಿದ್ದರು. ಈ ಜಗತ್ತಿನಲ್ಲಿ ಪುರುಷರಂತೆಯೇ ಅವರ ಪಾತ್ರವೂ ಅಷ್ಟೇ ಮುಖ್ಯ, ಆದರೆ ಲಿಂಗಗಳ ನಡುವಿನ ವ್ಯತ್ಯಾಸಗಳನ್ನು ಹೋಲಿಸುವ ಬದಲು ಅವುಗಳನ್ನು ಸಧ್ಬಳಕೆ ಮಾಡಿಕೊಳ್ಳಬೇಕು. ಸ್ಥಿರ ಮತ್ತು ಶಾಂತಿಯುತ ಸಮಾಜವನ್ನು ನಿರ್ಮಿಸಲು ಪುರುಷರು ಮತ್ತು ಮಹಿಳೆಯರ ನಡುವೆ ಸರಿಯಾದ ಸಮತೋಲನವು ಅತ್ಯಗತ್ಯವಾಗಿದೆ.. ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು ಮತ್ತು ಪರಸ್ಪರರ ಸಾಮರ್ಥ್ಯಗಳಿಗೆ ಗೌರವ ನೀಡುವುದು ಅಗತ್ಯವಾಗಿದೆ . ಪುರುಷರು ಮತ್ತು ಮಹಿಳೆಯರು ಪ್ರತಿಯೊಬ್ಬರೂ ತಮ್ಮ ಅಂತರ್ಗತ "ಪುರುಷ" ಮತ್ತು "ಸ್ತ್ರೀಲಿಂಗ" ಪದ ಗಳಿಗೆ ಆಂತರಿಕ ಸಮತೋಲನವನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಪದೇ ಪದೇ ಜನರಿಗೆ ನೆನಪಿಸಿದರು. ಆದಾಗ್ಯೂ, ಮಹಿಳೆಯರು ನಿಜವಾಗಿಯೂ ತಮ್ಮ ಪ್ರಭಾವ ಬೀರಬಹುದಾದ ಸ್ಥಳವು ಸಾಮಾಜಿಕ ಮಟ್ಟದಲ್ಲಿದೆ.
ಶ್ರೀ ಮಾತಾಜಿ ತಮ್ಮನ್ನು ತಾವು ಎಂದಿಗೂ ರಾಜಕೀಯ ಕಾರ್ಯಕರ್ತೆ ಎಂದು ಪರಿಗಣಿಸಿರಲಿಲ್ಲ. ಸ್ವಯಂ ಸಾಕ್ಷಾತ್ಕಾರದ ಮೂಲಕ ಪುರುಷರು ಮತ್ತು ಮಹಿಳೆಯರಲ್ಲಿ ಆಂತರಿಕ ಪರಿವರ್ತನೆಯಾಗಿ , ಆ ಮೂಲಕ ಅವರು ನೈಸರ್ಗಿಕ ಸಮತೋಲನವನ್ನು ಸಾಧಿಸುವುದು ಅವರ ದೃಷ್ಟಿಕೋನವಾಗಿದೆ . ಪುರುಷರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಮಹಿಳೆಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಈ ಸ್ವಯಂ ಪರಿವರ್ತನೆಯೇ ಪ್ರಮುಖ ಕಾರಣವಾಗಿದೆ.
"ಬೀಜಗಳು ತಾವಾಗಿಯೇ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಹೂವುಗಳು, ಹಣ್ಣುಗಳು ಮತ್ತು ಇತರ ವರ ಸೌಭಾಗ್ಯಗಳನ್ನು ಒದಗಿಸುವುದು ಭೂಮಿ ತಾಯಿ. ಅದೇ ರೀತಿ, ಮಗುವನ್ನು ಸೃಷ್ಟಿಸುವವಳು ಮಹಿಳೆ, ಮಗುವನ್ನು ಪೋಷಿಸಿ ಅಂತಿಮವಾಗಿ ನಾಳೆಯ ನಾಗರಿಕರನ್ನು ಬೆಳೆಸುತ್ತಾಳೆ. ಆದ್ದರಿಂದ ಮಹಿಳೆಯರು ಭೂಮಿ ತಾಯಿಯನ್ನು ಇಡೀ ಮಾನವಕುಲದ ಕಟ್ಟಡವೆಂದು ಪರಿಗಣಿಸಬೇಕು".
ಪೂರ್ವ ಮತ್ತು ಪಶ್ಚಿಮ ದೇಶ ಎರಡರಲ್ಲೂ ನೆಲೆಸಿ ವ್ಯಾಪಕವಾಗಿ ಪ್ರಯಾಣಿಸಿದ ಅವರು, ಮಹಿಳೆಯರನ್ನು ನಡೆಸಿಕೊಳ್ಳುವ ವಿಧಾನದಲ್ಲಿನ ವ್ಯತ್ಯಾಸಗಳನ್ನು ಕಂಡರು ಮತ್ತು ಅನೇಕರಿಗೆ ಹಕ್ಕುಗಳ ಕೊರತೆಯಿದೆ ಎಂದು ಒಪ್ಪಿಕೊಂಡರೂ, ಮಹಿಳೆಯರ ಬಗ್ಗೆ ಗೌರವದ ಕೊರತೆಯೇ ಅವರನ್ನು ಗಂಭೀರವಾಗಿ ಚಿಂತೆಗೀಡು ಮಾಡಿತು.
ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮದೇ ಆದ ಮೌಲ್ಯಗಳನ್ನು ಅರ್ಥೈಸಿಕೊಳ್ಳಬೇಕು ಮತ್ತು ಪರಸ್ಪರರ ಮೌಲ್ಯಗಳನ್ನು ಗೌರವಿಸಿದಾಗ , ಅದನ್ನು ಸ್ವಯಂ ಸಾಕ್ಷಾತ್ಕಾರದ ಮೂಲಕ ಸಾಧಿಸಬಹುದು ಎಂದು ಎಲ್ಲರೂ ಭಾವಿಸಿದಾಗ, ಮಾನವಕುಲದ ನಡುವೆ ಸಾಮರಸ್ಯವನ್ನು ಸಾಧಿಸಲಾಗುತ್ತದೆ.
"ಆದ್ದರಿಂದ, ಈ ಕ್ಷಣದಲ್ಲಿ, ನಮ್ಮ ಸೃಷ್ಟಿಕರ್ತ ನಮಗೆ ನೀಡಿರುವ ಈ ಮಹಾನ್ ಶಕ್ತಿಯ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ನಾವು ಏನು ಕಂಡುಕೊಳ್ಳುತ್ತೇವೆ? ಪೂರ್ವದಲ್ಲಾಗಲಿ ಅಥವಾ ಪಶ್ಚಿಮದಲ್ಲಾಗಲಿ, ಮಹಿಳೆಯರು ತಮ್ಮ ಶ್ರೇಷ್ಠತೆಯ ಪೂರ್ಣ ಅಭಿವ್ಯಕ್ತಿತ್ವವನ್ನು ನೀಡಲು ಸಾಧ್ಯವಾಗಿಲ್ಲ."
ಖಂಡಿತವಾಗಿಯೂ, ಶ್ರೀ ಮಾತಾಜಿ ಮಹಿಳೆಯರಿಗೆ ಶಿಕ್ಷಣ, ವೃತ್ತಿ, ಸುರಕ್ಷಿತ ಜೀವನ ವಾತಾವರಣ ಮತ್ತು ಕಾನೂನು ರಕ್ಷಣೆಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದರು.
"ಮಾನವ ಸಮಾಜದಲ್ಲಿ ಮಹಿಳೆಯರ ಪಾತ್ರ ತಾಯಿ, ಮಕ್ಕಳ ಸಂತಾನೋತ್ಪತ್ತಿ ಮತ್ತು ಸಂರಕ್ಷಕಿ ಅಥವಾ ಹೆಂಡತಿ ಅಥವಾ ಸಹೋದರಿ ಮಾತ್ರ ಎಂದು ನಾನು ಸೂಚಿಸುತ್ತಿಲ್ಲ. ಮಹಿಳೆಯರು ಜೀವನದ ಪ್ರತಿಯೊಂದು ಅಂಶದಲ್ಲೂ ಸಮಾನ ಪಾಲುದಾರರಾಗಿ ಭಾಗವಹಿಸುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ: ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಆಡಳಿತಾತ್ಮಕ ಮತ್ತು ಉಳಿದೆಲ್ಲದರಲ್ಲೂ …………. ಆದರೆ, ಅವರು ತಾಯಂದಿರಾಗಿದ್ದರೆ, ಅವರು ತಮ್ಮ ಮಕ್ಕಳ ಬಗ್ಗೆ ಮತ್ತು ಸಮಾಜದ ಬಗ್ಗೆ ದೊಡ್ಡ ಜವಾಬ್ದಾರಿಯನ್ನು ಹೊಂದಿರುತ್ತಾರೆ".
ಆದಾಗ್ಯೂ, ನಾವು ನಮ್ಮನ್ನು ಅವಲೋಕಿಸಿಕೊಂಡು ಆತ್ಮಸಾಕ್ಷಾತ್ಕಾರದ ಶಕ್ತಿಯು ನಮ್ಮನ್ನು ಮುನ್ನಡೆಸಲು ಅವಕಾಶ ನೀಡಿದಾಗ ಮಾತ್ರ ಲಿಂಗಗಳ ನಡುವಿನ ಅಸಮತೋಲನವನ್ನು ನಿಜವಾಗಿಯೂ ಸರಿಪಡಿಸಬಹುದು ಎಂದು ಶ್ರೀ ಮಾತಾಜಿ ಭಾವಿಸಿದರು.
"ನಮಗೆ ಬೇಕಾಗಿರುವುದು ಎರಡು ವಿಪರೀತಗಳ ನಡುವಿನ ಸಮತೋಲನ. ನಮಗೆ ಮಹಿಳೆ ಪುರುಷರೊಂದಿಗೆ ಸಮಾನ ಪಾಲುದಾರಳಾಗಿ ಬೇಕು ಆದರೆ ಅವನ ಸಹಧರ್ಮಿನಿಯಾಗಿ....