ಒಂದು ಪ್ರಮುಖ ಕ್ಷಣ
ಶುದ್ಧ ರೂಪಾಂತರದ ಶಾಶ್ವತ ಕ್ಷಣ
ಮೇ 5, 1970 ರಂದು, ಮುಂಬೈ ಸಮೀಪದ ಭಾರತದ ಪಶ್ಚಿಮ ಕರಾವಳಿಯ ಸಮುದ್ರತೀರದ ಪಟ್ಟಣವಾದ ನರ್ಗೋಲ್‌ನಲ್ಲಿ, ಒಂದು ವಿಶಿಷ್ಟವಾದ ಪ್ರಮುಖ ಘಟನೆ ನಡೆಯಿತು: ಅದುವೇ ಮಾನವನ ಮೆದುಳಿನ ಲಿಂಬಿಕ್ ಪ್ರದೇಶದ ಶಕ್ತಿ ಕೇಂದ್ರವಾದ ‘ಸಹಸ್ರಾರ’ದ ತೆರೆಯುವಿಕೆಯಾಗಿತ್ತು
ಈ ಘಟನೆಯ ಮಹತ್ವವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಶ್ರೀ ಮಾತಾಜಿಯವರ ಆಧ್ಯಾತ್ಮಿಕ ಪರಂಪರೆಯಲ್ಲಿ ಮುಂದೆ ನಡೆದ ಎಲ್ಲವೂ ಈ ಘಟನೆಯಿಂದಲೇ ಉದ್ಭವಿಸಿದವು. ಒಂದು ಪ್ರಮುಖ ವೈಜ್ಞಾನಿಕ ಆವಿಷ್ಕಾರ ಅಥವಾ ಸುಂದರವಾದ ಕಲಾಕೃತಿಯಂತೆ, ಈ ಅಭೂತಪೂರ್ವ ಯಶಸ್ಸು ವರ್ಷಗಳ ಕಾಲ ಪ್ರತಿಧ್ವನಿಸುತ್ತಾ, ಅವರ ಕೆಲಸ ಮತ್ತು ದೃಷ್ಟಿಕೋನದ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರ ಮೇಲೆ ಪ್ರಭಾವ ಬೀರಿದೆ.
ಶ್ರೀ ಮಾತಾಜಿಯವರ ಈ ಆವಿಷ್ಕಾರವು ಅಪ್ರತಿಮವಾಗಿತ್ತು ಮತ್ತು ಇಂದಿಗೂ ಅನನ್ಯವಾಗಿದೆ. ಸಹಸ್ರಾರ ಚಕ್ರದ ತೆರೆವಿಕೆ ಶುದ್ಧ ರೂಪಾಂತರದ ಕ್ಷಣವಾಗಿದೆ, ಮತ್ತು ಇದು ಮಾನವರು ತಮ್ಮ ಮಿತಿಗಳನ್ನು ಮೀರಿ ಬೆಳೆಯಲು ಮತ್ತು ಯಾವುದೋ ಒಂದು ಉನ್ನತ ಶಕ್ತಿಯೊಂದಿಗೆ ಸಂಪರ್ಕ ಹೊಂದಲು ಮಾರ್ಗವನ್ನು ಒದಗಿಸುತ್ತದೆ. ಈ ಘಟನೆ ಮತ್ತು ಅದು ನೀಡಿದ ಜಾಗೃತಿಗಾಗಿ ಅವರು ಕಾಯುತ್ತಿದ್ದರು.
"ನಾನು ದಾರಿಗಳನ್ನು ಮತ್ತು ವಿಧಾನಗಳನ್ನು ಹುಡುಕುತ್ತಿದ್ದೆ," ಎಂದು ಅವರು ವಿವರಿಸಿದರು, "ನನ್ನದೇ ಆದ ಧ್ಯಾನದ ಶೈಲಿಯ ಮೂಲಕ ನನ್ನೊಳಗೆ ಎಲ್ಲಾ ಸಾಧ್ಯತೆಗಳನ್ನು ಪರೀಕ್ಷಿಸುತ್ತಿದ್ದೆ." ನಾನು ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ, ಆ ವ್ಯಕ್ತಿಗೆ ಯಾವ ಸಮಸ್ಯೆಗಳಿವೆ ಮತ್ತು ಅವುಗಳನ್ನು ಅವರು ಹೇಗೆ ಪರಿಹರಿಸಬಹುದು ಎಂಬುದನ್ನು ನಾನು ಗಮನಿಸುತ್ತಿದ್ದೆ. ನಾನು ಆ ವ್ಯಕ್ತಿಯನ್ನು ಆಂತರಿಕವಾಗಿ ಅಧ್ಯಯನ ಮಾಡಲು ಪ್ರಯತ್ನಿಸುತ್ತಿದ್ದೆ."
ಮಾನವನ ಪೇಚಾಟಗಳನ್ನು ಅರ್ಥಮಾಡಿಕೊಳ್ಳುವ ಕೀಲಿಯು 'ಸೂಕ್ಷ್ಮ ಶರೀರ'ದ ಪ್ರಾಚೀನ ಜ್ಞಾನದಲ್ಲಿದೆ ಎಂದು ಶ್ರೀ ಮಾತಾಜಿಯವರಿಗೆ ತಿಳಿದಿತ್ತು,
ಭೌತಿಕ ದೇಹದ ಆಚೆಗಿನ ಈ ಶರೀರವು ನೈಜವಾಗಿದ್ದು, ಇದು ನಾಡಿಗಳು, ಶಕ್ತಿ ಕೇಂದ್ರಗಳು (ಚಕ್ರಗಳು) ಮತ್ತು 'ಕುಂಡಲಿನಿ' ಎಂದು ಕರೆಯಲ್ಪಡುವ ಮೂಲ ಶಕ್ತಿ ಮೂಲದಿಂದ ಕೂಡಿದೆ.ಇದರ ಕಾರ್ಯಗಳು ಮತ್ತು ರಚನೆಯು ವಿಜ್ಞಾನಕ್ಕೆ ತಿಳಿದಿರುವ ಭೌತಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ, ಆದರೆ ಅತ್ಯಂತ ಸೂಕ್ಷ್ಮ ಮಟ್ಟದಲ್ಲಿರುತ್ತವೆ. "ನಡೆಯುತ್ತಿದ್ದ ಎಲ್ಲವನ್ನೂ ನಾನು ನೋಡಬಲ್ಲವಳಾಗಿದ್ದೆ," ಎಂದು ಅವರು ನೆನಪಿಸಿಕೊಂಡರು
. "ಅದು ಆ ದಿನವಾಗಿತ್ತು, ಹೇಗಾದರೂ ಮಾಡಿ ನಾನು ಕೊನೆಯ ಚಕ್ರವನ್ನು (ಸಹಸ್ರಾರ) ತೆರೆಯಲೇಬೇಕು ಎಂದು ನಿರ್ಧರಿಸಿದೆ. “
ಈ ಚಕ್ರ ಅಥವಾ ಶಕ್ತಿ ಕೇಂದ್ರವನ್ನು ಸಂಸ್ಕೃತದಲ್ಲಿ 'ಸಹಸ್ರಾರ' ಎಂದು ಕರೆಯಲಾಗುತ್ತದೆ, ಇದು ಮೆದುಳಿನ ಲಿಂಬಿಕ್ ಪ್ರದೇಶದಲ್ಲಿ ನೆಲೆಸಿದೆ.
ಈ ಶಕ್ತಿ ಕೇಂದ್ರದ ತೆರವಿಕೆಯು ಎಲ್ಲವನ್ನೂ ಚಾಲನೆಗೆ ತರುವ ಪ್ರಚೋದಕವಾಗಿತ್ತು, ಇದು ಸತ್ಯದ ಕಡೆಗಿನ ಒಂದು ಹೆಬ್ಬಾಗಿಲು.
ನಾನು ಏಕಾಂಗಿಯಾಗಿದ್ದೆ ಮತ್ತು ನನಗೆ ತುಂಬಾ ಹಿತವೆನಿಸುತ್ತಿತ್ತು. ಮಾತನಾಡಲು ಸುತ್ತಮುತ್ತ ಯಾರೂ ಇರಲಿಲ್ಲ.ತದನಂತರ, ಧ್ಯಾನದಲ್ಲಿ, ಸಹಸ್ರಾರವನ್ನು ತೆರೆಯಬೇಕಾದ ಸಮಯ ಬಂದಿದೆ ಎಂದು ನನಗೆ ಅನಿಸಿತು.ನಾನು ಸಹಸ್ರಾರವನ್ನು ತೆರೆಯಬೇಕೆಂದು ಇಚ್ಛಿಸಿದ ಕ್ಷಣದಲ್ಲಿ, ಕುಂಡಲಿನಿಯು ನನ್ನೊಳಗೆ ಟೆಲಿಸ್ಕೋಪ್‌ನಂತೆ ಒಂದಾದ ನಂತರ ಒಂದನ್ನು ತೆರೆಯುತ್ತಾ ಮೇಲಕ್ಕೆ ಚಲಿಸುವುದನ್ನು ನಾನು ಗಮನಿಸಿದೆ. ಅದು ಕರಗಿದ, ಕೆಂಪು-ಬಿಸಿಯಾದ ಕಬ್ಬಿಣದ ಬಣ್ಣದಂತಿತ್ತು.
"ನಂತರ ನಾನು ಮೇಲಕ್ಕೆ ಏರುತ್ತಿದ್ದ ಕುಂಡಲಿನಿಯ ಹೊರಗಿನ ರಚನೆಯನ್ನು ನೋಡಿದೆ, ಅದು ಪ್ರತಿ ಚಕ್ರದಲ್ಲಿ ಶಬ್ದಗಳನ್ನು ಸೃಷ್ಟಿಸುತ್ತಿತ್ತು. ಕುಂಡಲಿನಿಯು ಬ್ರಹ್ಮರಂಧ್ರವನ್ನು ಭೇದಿಸಲು ಮೇಲಕ್ಕೆ ಚಲಿಸಿತು ."
ಬ್ರಹ್ಮರಂಧ್ರವು ತಲೆಯ ಮೇಲ್ಭಾಗದಲ್ಲಿರುವ ಮೃದುವಾದ ಮೂಳೆಯ ಪ್ರದೇಶವಾಗಿದೆ.ಶ್ರೀ ಮಾತಾಜಿಯವರು ವಿವರಿಸಿದ ಈ ಅನುಭವವು 'ಆತ್ಮ ಸಾಕ್ಷಾತ್ಕಾರ'ವಾಗಿತ್ತು, ಇದು ಅನೇಕರು ಇಚ್ಚಿಸುವ ಜ್ಞಾನ ಮತ್ತು ಅರಿವಿನ ಅರಳುವಿಕೆಯಾಗಿತ್ತು.ಅವರು, ಸಾಮಾನ್ಯವಾಗಿ ವರ್ಷಗಳ ಸಮರ್ಪಣೆ ಮತ್ತು ಪರಿಶ್ರಮದಿಂದ ಮಾತ್ರ ಪಡೆಯಬಹುದಾದ ಬಹುಮಾನದ ಬಗ್ಗೆ ಅವರು ಮಾತನಾಡುತ್ತಿದ್ದರು.
"ಆ ಕ್ಷಣದಲ್ಲಿ ಮೇಲಿದ್ದ ಎಲ್ಲಾ ಶಕ್ತಿಯು ಇದ್ದಕ್ಕಿದ್ದಂತೆ ಎಲ್ಲಾ ದಿಕ್ಕುಗಳಿಂದ ತಂಪಾದ ಗಾಳಿಯಂತೆ ನನ್ನೊಳಗೆ ಪ್ರವೇಶಿಸಿತು ಎಂದು ನನಗೆ ಅನಿಸಿತು."
"ನಾನು ಇಡೀ ಸಹಸ್ರಾರವು ತೆರೆದುಕೊಳ್ಳುವುದನ್ನು ಕಂಡೆ ಮತ್ತು ನನ್ನ ತಲೆಯ ಮೂಲಕ ದೊಡ್ಡ ಗಾಳಿಯ ಮಳೆ ಹರಿಯಲು ಪ್ರಾರಂಭಿಸಿತು. ನಾನು ಈಗ ಕಳೆದುಹೋಗಿದ್ದೇನೆ, 'ನಾನು' ಎಂಬುದು ಇಲ್ಲ ಎಂದು ನನಗೆ ಅನಿಸಿತು. ಅಲ್ಲಿ ಕೇವಲ ಕೃಪೆ ಮಾತ್ರ ಇತ್ತು. ಅದು ನನಗೆ ಸಂಪೂರ್ಣವಾಗಿ ಸಂಭವಿಸುವುದನ್ನು ನಾನು ನೋಡಿದೆ."
ಈ ಆತ್ಮ ಸಾಕ್ಷಾತ್ಕಾರದ ಅನುಭವವನ್ನು, ಈ ಉನ್ನತ ಜ್ಞಾನವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಬೇಕೆಂದು ಶ್ರೀ ಮಾತಾಜಿಯವರಿಗೆ ಅರವಿತ್ಹು
ಆಗಲೇ ನಾನು ಈ ಕೆಲಸವನ್ನು ಪ್ರಾರಂಭಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅರಿತುಕೊಂಡೆ. ಗೊಂದಲಗಳು ಮುಗಿದಿದ್ದವು. ಕೊನೆಗೂ ಸಮಯ ಬಂದಿತ್ತು” “ಭಯಪಡಲು ಏನೂ ಇರಲಿಲ್ಲ. ಇದನ್ನು ಅಂತಿಮವಾಗಿ ಮಾಡಲೇಬೇಕಿತ್ತು. ಮಾನವರಲ್ಲಿ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶದಿಂದಲೇ ನಾನು ಈ ಜಗತ್ತಿಗೆ ಬಂದಿದ್ದೆ." "ಜನರು ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಪಡೆಯುವವರೆಗೆ ಅಥವಾ ತಮ್ಮ ಸ್ವಂತ ಆತ್ಮವನ್ನು ಅರ್ಥಮಾಡಿಕೊಳ್ಳುವವರೆಗೆ, ಈ ಕಾರ್ಯವನ್ನು ಸಾಧಿಸಿವುದು ಅಸಾಧ್ಯವೆಂದು ನಾನು ಭಾವಿಸಿದೆ." "ಈ ಜಗತ್ತಿನಲ್ಲಿ ಬೇರೆ ಯಾರು ಏನೇ ಮಾಡಲು ಪ್ರಯತ್ನಿಸಿದರೂ ಅದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.
ಶ್ರೀ ಮಾತಾಜಿಅವರು ತಮ್ಮ ಆಧ್ಯಾತ್ಮಿಕ ಕೆಲಸವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಶ್ರೀ ಮಾತಾಜಿಯವರು ಹೀಗೆ ವಿವರಿಸಿದರು: "ನನಗೆ ಚೆನ್ನಾಗಿ ತಿಳಿದಿದ್ದ ಒಬ್ಬ ವೃದ್ಧ ಮಹಿಳೆಯ ಮೇಲೆ ನಾನು ಇದನ್ನು ಪ್ರಯೋಗಿಸಿದೆ. ಅವಳಿಗೆ ಸಾಕ್ಷಾತ್ಕಾರ ಸಿಕ್ಕಾಗ ನನಗೆ ತೃಪ್ತಿಯಾಯಿತು." "ಇನ್ನೂ ಅನೇಕರು ತಮ್ಮ ಸಾಕ್ಷಾತ್ಕಾರವನ್ನು ಪಡೆಯಬಹುದು ಎಂದು ನನಗೆ ಅನಿಸಿತು. ಒಬ್ಬ ವ್ಯಕ್ತಿಗೆ ಸಾಕ್ಷಾತ್ಕಾರ ನೀಡುವುದು ಸುಲಭವಾಗಿತ್ತು. ಒಬ್ಬ ವ್ಯಕ್ತಿಯನ್ನು ಜಾಗೃತಗೊಳಿಸುವುದು ತುಂಬಾ ಸುಲಭವಾಗಿತ್ತು, ಆದರೆ ಅದನ್ನು ಸಾಮೂಹ ಮಟ್ಟದಲ್ಲಿ ಜನಸಾಮಾನ್ಯರಿಗೆ ತಲುಪಿಸಲು ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿತ್ತು."
ಪ್ರತಿಯೊಬ್ಬರೂ ಒಂದೇ ಸಾಕ್ಷಾತ್ಕಾರದ ಮೂಲಕ ಆತ್ಮ ಸಾಕ್ಷಾತ್ಕಾರ ಪಡೆಯಬೇಕಿತ್ತು, ಆದರೆ ಇಂತಹ ಕೆಲಸಗಳು ಈ ಹಿಂದೆ ಎಂದೂ ಸಾಮೂಹಿಕ ಮಟ್ಟದಲ್ಲಿ ನಡೆದಿಲ್ಲ ಎಂಬುದು ಸತ್ಯ. ನಾನು ಇ ಎಲ್ಲವನ್ನು ಧ್ಯಾನದ ಮೂಲಕ ಸಾಧಿಸಿದೆ.
ಅವರ ಕೆಲಸವು ತಳಮಟ್ಟದಲ್ಲಿ ಹಲವು ವರ್ಷಗಳ ಕಾಲ ಸದ್ದಿಲ್ಲದೆ ಮುಂದುವರೆಯಿತು. "ನನ್ನಲ್ಲಿರುವ ಶಕ್ತಿಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಯಾರೂ ನನ್ನನ್ನು ತಿಳಿದಿರಲಿಲ್ಲ ಅಥವಾ ನನ್ನ ಬಗ್ಗೆ ಯಾವುದೇ ಕಲ್ಪನೆಯನ್ನೂ ಹೊಂದಿರಲಿಲ್ಲ."
"ಆದರೆ ಆ ಮಹಿಳೆಯಲ್ಲಿ ಕುಂಡಲಿನಿಯು ಜಾಗೃತಗೊಂಡಾಗ, ಯಾವುದೋ ಒಂದು ತರಹದ ಸೂಕ್ಷ್ಮ ಶಕ್ತಿಯು ಅವಳೊಳಗೆ ಪ್ರವೇಶಿಸಿದೆ ಎಂದು ನನಗೆ ಅನಿಸಿತು," ಎಂದು ಶ್ರೀ ಮಾತಾಜಿ ನೆನಪಿಸಿಕೊಂಡರು. "ನಂತರ ಇನ್ನೂ ಹನ್ನೆರಡು ಜನರಿಗೆ ಸಾಕ್ಷಾತ್ಕಾರವನ್ನು ನೀಡಿದರು ."
ಆತ್ಮ ಸಾಕ್ಷಾತ್ಕಾರದ ಮೂಲಕ, ಜನರು ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಪಡೆದರು. ಈ ಹಿಂದೆ ತಮಗೆ ಅರಿಯದಿದನ್ನು ಅವರು ಅರಿತುಕೊಂಡರು.
"ನನಗೆ ಒಂದು ವಿಷಯ ಖಚಿತವಾಗಿ ಅರಿವಾಯಿತು, ಈ ಹನ್ನೆರಡು ಜನರು ಹನ್ನೆರಡು ವಿಭಿನ್ನ ಸ್ವಭಾವಗಳನ್ನು ಹೊಂದಿದ್ದರು ಮತ್ತು ಹೇಗಾದರೂ ಅವರೊಂದಿಗೆ ಕುಳಿತು, ಆತ್ಮವು ಹೊಂದಿರುವ ಪ್ರಕಾಶದ ಶಕ್ತಿಯನ್ನು ಹೇಗೆ ಸಂಯೋಜಿಸಬೇಕು ಎಂದು ಅವರಿಗೆ ತಿಳಿಸಬೇಕು," ಎಂದು ಅವರು ಹೇಳಿದರು.
"ಇದು ಸೂಜಿಯ ಸಹಾಯದಿಂದ ಹೂವುಗಳನ್ನು ಒಂದೇ ಹಾರವಾಗಿ ಪೋಣಿಸಿದಂತೆ... ಅವರು ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಪಡೆದಾಗ, ಅವರಲ್ಲಿ, ಪ್ರತಿಯೊಬ್ಬರಲ್ಲೂ ಅದು ಒಂದಾದ ನಂತರ ಒಂದರಂತೆ ಒಂದೇ ದಾರದಲ್ಲಿ ಸಂಯೋಜಿತವಾಗುತ್ತಿರುವುದನ್ನು ನಾನು ಗಮನಿಸಿದೆ."