ಅನಾಹತ ಚಕ್ರ

ಅನಾಹತ ಚಕ್ರ

ನಿರ್ವ್ಯಾಜ ಪ್ರೀತಿ ಮತ್ತು ನಿರ್ಭಯತೆ

ಮಾನವ ಭ್ರೂಣ ರಚನೆಯ ಆರಂಭಿಕ ಹಂತದಲ್ಲಿ, ಶಾಶ್ವತವಾದ ಸರ್ವವ್ಯಾಪಿ ಚೈತನ್ಯ ಶಕ್ತಿಯು (ಆತ್ಮ) ಮೊದಲು ಮೆದುಳನ್ನು ಪ್ರವೇಶಿಸುತ್ತದೆ. ಶ್ರೀ ಮಾತಾಜಿ ಈ ಕ್ಷಣವನ್ನು ನಮ್ಮೊಳಗಿನ ಜೀವ ಶಕ್ತಿಯನ್ನು ಪ್ರಚೋದಿಸುವ ಮತ್ತು ನಮ್ಮ ಕುಂಡಲಿನಿಯು ನಮ್ಮ ಸೂಕ್ಷ್ಮ ದೇಹವನ್ನು ಭೌತಿಕ ದೇಹದ ಬೆಳವಣಿಗೆಯೊಂದಿಗೆ ಹೆಣೆಯುವ ಘಟನೆಗಳ ಸರಪಣಿಯನ್ನು ಸೃಷ್ಟಿಸುವ ಮೊದಲ ಹೃದಯ ಬಡಿತ ಎಂದು ವಿವರಿಸುತ್ತಾರೆ. ಭ್ರೂಣದ ತಲೆಯ ಬಳಿ ಬೆಳೆಯುವ ಈ ಮಿಡಿಯುವ ಹೃದಯವು ನಂತರ ನಮ್ಮ ದೇಹವು ಬೆಳೆದಂತೆ ಎದೆಯೊಳಗೆ ತಳ್ಳಲ್ಪಡುತ್ತದೆ. ಜೀವನದ ಆಟವನ್ನು ವೀಕ್ಷಿಸುವ ಪ್ರೇಕ್ಷಕನಂತೆ ಅದು ಶಾಶ್ವತವಾಗಿ ಶುದ್ಧ ಮತ್ತು ನಮ್ಮ ಜೀವನದ ಯಾವುದೇ ಘಟನೆಗಳಿಂದ ಪ್ರಭಾವಿತವಾಗದೆ ಅಲ್ಲಿ ವಾಸಿಸುತ್ತದೆ.

ಕುಂಡಲಿನಿ(opens in new tab) ಈ ಕೇಂದ್ರವನ್ನು ಪ್ರಕಾಶಮಾನಗೊಳಿಸಿದಾಗ, ನಾವು ಶುದ್ಧವಾದ ನಿರ್ವ್ಯಾಜ ಪ್ರೀತಿಯ ಅನುಭವವನ್ನು ಪಡೆಯುತ್ತೇವೆ. ಅದು ನಮ್ಮ ಆತ್ಮದ ನಿಜವಾದ ಸ್ವಭಾವವಾಗಿದೆ. ಮೂರನೇ ಚಕ್ರವನ್ನು ಆವರಿಸಿರುವ ಭವಸಾಗರದ ಭ್ರಮೆಗಳಿಂದ ನಮ್ಮ ಚೇತನ ಹೊರಬರುವಂತೆ ಆಗುತ್ತಿದ್ದು, ಲೋಕಜೀವನದ ವಿಷಯಗಳಿಂದ ವೈರಾಗ್ಯದ ಭಾವನೆ ಉಂಟಾಗುತ್ತದೆ. ಭ್ರಮೆಗಳಿಂದ ಸಂಪೂರ್ಣ ಮುಕ್ತರಾದಾಗ ನಾವು ಸಂಪೂರ್ಣ ನಿರ್ಭಯರಾಗುತ್ತೇವೆ.

ಶುದ್ಧ ಹೃದಯದಿಂದಲೇ ಕರುಣೆ ಮತ್ತು ಪ್ರೀತಿ ವ್ಯಕ್ತವಾಗುತ್ತವೆ. ಹೃದಯ ಚಕ್ರವು ನಮಗೆ ಜವಾಬ್ದಾರಿತನ ಮತ್ತು ಇತರರ ಕಡೆ ಸೌಮ್ಯ ಹಾಗೂ ಹಿತಕರ ವರ್ತನೆಯ ಭಾವನೆಯನ್ನು ನೀಡುತ್ತದೆ. ಈ ಹೃದಯ ಚಕ್ರವು ನಮಗೆ ಸಂಪೂರ್ಣ ಭದ್ರತೆ ಮತ್ತು ಆತ್ಮವಿಶ್ವಾಸವನ್ನೂ ನೀಡುತ್ತದೆ. ಇಂತಹ ವ್ಯಕ್ತಿತ್ವವು ಬಹಳ ಚೈತನ್ಯಮಯವಾಗಿದ್ದು, ದೃಷ್ಟಿ ಮತ್ತು ಜೀವನದ ಗುರಿಯಿಂದ ತುಂಬಿರುತ್ತದೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ ಮಹಾತ್ಮಗಾಂಧೀ. ಅವರ ನಿಸ್ವಾರ್ಥ ಪ್ರಯತ್ನವು ಭಾರತದ ಸ್ವಾತಂತ್ರ್ಯಕ್ಕೆ ಮಹತ್ತರ ಕೊಡುಗೆ ನೀಡಿತು..

ಸ್ಥಳ:
ಅನಾಹತ ಚಕ್ರವು ನಮ್ಮ ಮೆರುದಂಡದ ಒಳಭಾಗದಲ್ಲಿ ಇದೆ. ಇದು ಸುಮಾರು ಎದೆ ಮಟ್ಟದಲ್ಲಿ, ಸ್ಟರ್ನಮ್ (ಎದೆಮೂಳೆ) ಹಿಂಭಾಗದಲ್ಲಿದೆ. ಈ ಕೇಂದ್ರವು ಕಾರ್ಡಿಯಾಕ್ ಪ್ಲೆಕ್ಸಸ್‌ನ ಕಾರ್ಯವನ್ನು ನಿಯಂತ್ರಿಸುತ್ತದೆ. ಅನಾಹತ ಚಕ್ರದ ಚೈತನ್ಯವನ್ನು ನಮ್ಮ ಎರಡು ಕೈಗಳ ಕಿರುಬೆರಳುಗಳಲ್ಲಿ ಅನುಭವಿಸಬಹುದು.

ಬಣ್ಣ:
ಅನಾಹತ ಚಕ್ರವನ್ನು ಕೆಂಪು ಬಣ್ಣದಿಂದ ಪ್ರತಿನಿಧಿಸಲಾಗುತ್ತದೆ. ಇದು ವಾಯು ತತ್ತ್ವದೊಂದಿಗೆ ಸಂಯೋಜಿತವಾಗಿದೆ.

ಅನಾಹತ ಚಕ್ರದ ಗುಣಗಳು:

• ನಿರ್ವ್ಯಾಜ ಪ್ರೀತಿ
• ನಿರ್ವ್ಯಾಜ ಕರುಣೆ
• ಸೌಮ್ಯ ಮತ್ತು ಗೌರವಪೂರ್ಣ ವರ್ತನೆ
• ಸತ್ಯ
• ಆನಂದ
• ಆತ್ಮವಿಶ್ವಾಸ
• ನಿರ್ಭಯತೆ ಮತ್ತು ಜೀವನದಲ್ಲಿ ಭದ್ರತೆಯ ಭಾವನೆ
• ಸಕಾರಾತ್ಮಕ ತಂದೆ-ತಾಯಿ ಸಂಬಂಧಗಳು

kn-4-Anahata-01

 ಅನಾಹತ ಚಕ್ರದ ಮೂಲಭೂತ ಗುಣವೆಂದರೆ ನಿರ್ವ್ಯಾಜ ಪ್ರೀತಿ. ಆತ್ಮಸಾಕ್ಷಾತ್ಕಾರದ ನಂತರ ಈ ಚಕ್ರ ಸಕ್ರಿಯವಾದಾಗ, ನಾವು ಆತ್ಮವಿಶ್ವಾಸವುಳ್ಳವರಾಗಿ, ನೈತಿಕ ಜವಾಬ್ದಾರಿಯುಳ್ಳವರಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನ ಹೊಂದಿದವರಾಗಿ ಆಗುತ್ತೇವೆ. ಈ ಸೂಕ್ಷ್ಮ ಕೇಂದ್ರದ ಗುಣಗಳು ನಮ್ಮ ಚೇತನದಲ್ಲಿ ವ್ಯಕ್ತವಾದಾಗ, ನಾವು ಅಸ್ತಿತ್ವದ ಶುದ್ಧ ಆನಂದವನ್ನು ಅನುಭವಿಸುತ್ತೇವೆ. ಜೀವನದ ನಿಜವಾದ ಉದ್ದೇಶವನ್ನು ಕಂಡುಕೊಳ್ಳುತ್ತೇವೆ ಮತ್ತು ಸದಾ ಉನ್ನತ ಆಧ್ಯಾತ್ಮಿಕ ಚೇತನದ ಸ್ಥಿತಿಯತ್ತ ಬೆಳೆಯಲು ಪ್ರಯತ್ನಿಸುತ್ತೇವೆ.

ಅನುಭವ ಮತ್ತು ಪ್ರಯೋಜನಗಳು:
ನಿಮ್ಮ ಅನಾಹತ ಚಕ್ರದ ಅತ್ಯಂತ ಮುಖ್ಯ ದೈಹಿಕ ಕಾರ್ಯವೆಂದರೆ ಹೃದಯ ಮತ್ತು ಶ್ವಾಸಕೋಶಗಳ ನಿಯಂತ್ರಣ. ಈ ಅಂಗಗಳು ರಕ್ತಸಂಚಾರ ಮತ್ತು ಉಸಿರಾಟ ವ್ಯವಸ್ಥೆಗಳ ಆರೋಗ್ಯವನ್ನು ನಿಯಂತ್ರಿಸುವುದರಿಂದ, ಅವುಗಳ ಸರಿಯಾದ ಕಾರ್ಯ ಅತ್ಯಗತ್ಯವಾಗಿದೆ. ಅನಾಹತ ಚಕ್ರವು ಸ್ತನಗಳು ಮತ್ತು ಥೈಮಸ್ ಗ್ರಂಥಿಯನ್ನೂ ನಿಯಂತ್ರಿಸುತ್ತದೆ. ಥೈಮಸ್ ಗ್ರಂಥಿ ಎದೆಮೂಳೆಯ ಮೇಲ್ಭಾಗದ ಹಿಂದೆ ಇರುವ ಒಂದು ಸಣ್ಣ ಗ್ರಂಥಿಯಾಗಿದ್ದು, ರೋಗನಿರೋಧಕ ವ್ಯವಸ್ಥೆಯ ಕಾರ್ಯದಲ್ಲಿ ಬಹಳ ಮುಖ್ಯವಾಗಿದೆ.

ಕೆಲವೊಮ್ಮೆ ನಾವು ಪ್ರೀತಿ ಮತ್ತು ಕರುಣೆಯನ್ನು ಅಪೇಕ್ಷಣೀಯ ಭಾವನೆ ಮತ್ತು ಸ್ವಾರ್ಥದಂತಹ ಅಹಿತಕರವಾದ ಭಾವನೆಗಳೊಂದಿಗೆ ಗೊಂದಲಪಡಿಸುತ್ತೇವೆ. ಆದರೆ ಸಹಜ ಯೋಗವು ನಿಮ್ಮ ಹೃದಯವನ್ನು ದೈವಿಕ ಶಕ್ತಿಯಿಂದ ತುಂಬುವುದರಿಂದ, ನೀವು ಅದರ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಾಗುತ್ತದೆ. ನೀವು ಇತರರ ಅಗತ್ಯಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತೀರಿ. ನೀವು ಶುದ್ಧವಾಗಿ ಮತ್ತು ಸ್ವಾರ್ಥವಿಲ್ಲದೆ ಪ್ರೀತಿಸಲು ಸಾಧ್ಯವಾಗುತ್ತದೆ.

ಇತರೆ ಅನೇಕ ಚಕ್ರಗಳಂತೆ, ದೈನಂದಿನ ಜೀವನದ ಒತ್ತಡಗಳು ಅನಾಹತ ಚಕ್ರದಲ್ಲಿ ಅಡಚಣೆ ಮತ್ತು ಅಸಮತೋಲನವನ್ನು ಉಂಟುಮಾಡಬಹುದು. ಅತಿಯಾಗಿ ಯೋಚಿಸುವುದು, ಅತಿಯಾಗಿ ಯೋಜಿಸುವುದು, ಅಸುರಕ್ಷತೆ ಮತ್ತು ಆತಂಕ ಇವುಗಳೆಲ್ಲವೂ ಈ ಚಕ್ರದ ಅಸಮತೋಲನಕ್ಕೆ ಕಾರಣವಾಗಬಹುದು. ಆದರೆ ಧ್ಯಾನದ ಮೂಲಕ ಈ ಚಕ್ರವನ್ನು ಶಕ್ತಿಯುತಗೊಳಿಸಿದಾಗ, ನೀವು ಮರುಸಮತೋಲನವನ್ನು ಪಡೆಯುತ್ತೀರಿ. ನೀವು ಆತ್ಮವಿಶ್ವಾಸ ಮತ್ತು ಭದ್ರತೆಯನ್ನು ಅನುಭವಿಸುತ್ತೀರಿ ಹಾಗೂ ನಕಾರಾತ್ಮಕ ಪ್ರಭಾವಗಳಿಂದ ರಕ್ಷಿತರಾಗುತ್ತೀರಿ. ಹೃದಯ ಚಕ್ರ ಬಲವಾಗಿದ್ದಾಗ, ಜೀವನದ ಆನಂದವನ್ನು ಸಂಪೂರ್ಣವಾಗಿ ಅನುಭವಿಸಲು ನೀವು ಸ್ವತಂತ್ರರಾಗುತ್ತೀರಿ.

ನೀವು ನಕಾರಾತ್ಮಕ ತಂದೆ-ತಾಯಿ ಸಂಬಂಧಗಳನ್ನು ಅನುಭವಿಸಿದ್ದರೆ, ಬಲವಾದ ಅನಾಹತ ಚಕ್ರವು ಅವುಗಳನ್ನು ಸರಿಪಡಿಸಲು ಸಹ ಸಹಾಯ ಮಾಡುತ್ತದೆ. ನೀವು ನಿಮ್ಮ ವರ್ತನೆಗೆ ಮಿತಿಗಳನ್ನು ನಿಗದಿಪಡಿಸುವುದನ್ನೂ ಮತ್ತು ಇತರರ ಮಿತಿಗಳನ್ನು ಗೌರವಿಸುವುದನ್ನೂ ಕಲಿಯುತ್ತೀರಿ. ಇದರ ಫಲವಾಗಿ ನಿಮ್ಮ ಎಲ್ಲಾ ಸಂಬಂಧಗಳು ಉತ್ತಮವಾಗುತ್ತವೆ.

ಸ್ವಯಂ ಮೌಲ್ಯಮಾಪನ:
ನಿಮ್ಮ ಅನಾಹತ ಚಕ್ರದಲ್ಲಿ ಅಡಚಣೆಯಾಗಿದ್ದರೆ ಅಥವಾ ಅಸಮತೋಲನದಲ್ಲಿದ್ದರೆ, ಹೃದಯದ ಅಸಹಜ ಬಡಿತ , ಅಸ್ತಮಾ ಮತ್ತು ರೋಗನಿರೋಧಕ ಶಕ್ತಿಯ ಕುಂದುತನದಂತಹ ಲಕ್ಷಣಗಳನ್ನು ಅನುಭವಿಸಬಹುದು. ಗಂಭೀರ ಸ್ಥಿತಿಗಳಲ್ಲಿ ಹೃದಯಾಘಾತ, ಸ್ತನ ಕ್ಯಾನ್ಸರ್ ಮತ್ತು ಶ್ವಾಸಕೋಶ ಸಂಬಂಧಿತ ರೋಗಗಳೂ ಸಂಭವಿಸಬಹುದು. ಆದರೆ ನೀವು ಅಷ್ಟು ಗಂಭೀರ ಸ್ಥಿತಿಗೆ ತಲುಪಿರುವ ಸಾಧ್ಯತೆ ಕಡಿಮೆ. ಈ ಚಕ್ರವನ್ನು ಸಮತೋಲನಗೊಳಿಸುವುದು ಸರಳವಾಗಿದ್ದು, ಗಂಭೀರ ಹಾಗೂ ಸಣ್ಣ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಅಸಮತೋಲನದ ಕಾರಣಗಳು:

• ಭಯ
• ಅತಿಯಾದ ಜವಾಬ್ದಾರಿ / ಜವಾಬ್ದಾರಿಯ ಕೊರತೆ
• ಕೇವಲ ಸ್ವಾರ್ಥ

ಸಮತೋಲನ ಹೇಗೆ ಸಾಧಿಸಬೇಕು:
ನಿಮ್ಮ ಅನಾಹತ ಚಕ್ರವನ್ನು ಸಮತೋಲನಗೊಳಿಸಲು, ಕೆಲವು ಕ್ಷಣಗಳ ಕಾಲ ಆಳವಾಗಿ ಮತ್ತು ನಿಧಾನವಾಗಿ ಉಸಿರಾಡಿ. ಉಸಿರೆಳೆಯುವಾಗ ಮತ್ತು ಬಿಡುವಾಗ ನಿಮ್ಮ ದೇಹ ವಿಶ್ರಾಂತಿಯಾಗುವುದನ್ನು ಅನುಭವಿಸುತ್ತೀರಿ. ಒಂದು ಆಳವಾದ ಉಸಿರನ್ನು ತೆಗೆದುಕೊಂಡು ಕೆಲವು ಕ್ಷಣಗಳ ಕಾಲ ಹಿಡಿದುಕೊಳ್ಳಿ. ನಂತರ ನಿಧಾನವಾಗಿ ಮತ್ತು ಮೃದುವಾಗಿ ಉಸಿರನ್ನು ಬಿಡಿ. ಈ ಪ್ರಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಿ.

ನಿಮ್ಮ ಬಲ, ಮಧ್ಯ ಮತ್ತು ಎಡ ಅನಾಹತ ಚಕ್ರಗಳನ್ನು ಸಮತೋಲನಗೊಳಿಸಲು ಈ ವಿಧಾನವನ್ನು ಕೂಡ ಬಳಸಬಹುದು. ನಿಮ್ಮ ಬಲಗೈಯನ್ನು ಹೃದಯ ಚಕ್ರದಿಂದ ಕೆಲವು ಇಂಚು ದೂರದಲ್ಲಿ,ಅಂಗೈಯನ್ನು ಒಳಮುಖವಾಗಿರಿಸಿ. ನಿಮ್ಮ ಕೈ ಮೂಲಕ ಶಕ್ತಿ ಹರಿಯುತ್ತಿರುವ ಅನುಭವವಾಗುವಾಗ, ಆ ಚಕ್ರದ ಸುತ್ತ ಗಡಿಯಾರದ ದಿಕ್ಕಿನಲ್ಲಿ ಕೈಯನ್ನು ತಿರುಗಿಸಿ. ಈ ತಿರುಗುವಿಕೆಯನ್ನು ಹಲವಾರು ಬಾರಿ ಪುನರಾವರ್ತಿಸಿ.

ನೀವು ವಿಶೇಷವಾಗಿ ಎಡ ಅನಾಹತ ಚಕ್ರವನ್ನು ಸಮತೋಲನಗೊಳಿಸಲು, ಧ್ಯಾನ ಮಾಡುವಾಗ ನಿಮ್ಮ ಬಲಗೈಯನ್ನು ಹೃದಯದ ಮೇಲೆ ಇಡಿ. ಈ ಪದಗಳನ್ನು ಹಲವಾರು ಬಾರಿ ಹೇಳಿ: “ನಾನು ನನ್ನ ಆತ್ಮದೊಂದಿಗೆ ಒಂದಾಗಿದ್ದೇನೆ.”
ಈ ಪದಗಳನ್ನು ನಿಮ್ಮ ಹೃದಯದೊಳಗೆ ಅನುಭವಿಸಿ.