ಸಮಗ್ರ ಆರೋಗ್ಯ
ಆಂತರಿಕ ಗುಣಪಡಿಸುವಿಕೆಯ ಸೂಕ್ಷ್ಮ ವಿಜ್ಞಾನ
ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದ್ದರೂ, ಮುಖ್ಯವಾಹಿನಿಯ ಔಷಧವು ಮನೋದೈಹಿಕ ಮತ್ತು ಮನೋವೈದ್ಯಕೀಯ ಅಸ್ವಸ್ಥತೆಗಳ ಆಳವಾದ ಮತ್ತು ದೀರ್ಘಕಾಲೀನ ಚಿಕಿತ್ಸೆಯಲ್ಲಿ ವಿಫಲಗೊಳ್ಳುತ್ತದೆ ಏಕೆಂದರೆ ಅದು ಸಮಸ್ಯೆಗಳ ಮೂಲಕಾರಣಗಳಿಗಿಂತ ರೋಗಲದಕ್ಷಣಗಳನ್ನು ಪರಿಹರಿಸುವಲ್ಲಿ ಮತ್ತು ಇಡೀ ಜೀವದ ಸೂಕ್ಷ್ಮತೆಯಲ್ಲಿ ಅಲ್ಲ, ದೇಹವೇ ಕೇಂದ್ರೀವಾಗಿಸಿ ಪ್ರತ್ಯೇಕವಾಗಿ ಪರಿಗಣಿಸುತ್ತದೆ.
ಶ್ರೀ ಮಾತಾಜಿ,
ಭಾರತದ ವಿಭಜನೆಯ ನಂತರದ ರಾಜಕೀಯ ಘಟನೆಗಳು ಅವರು ಅದನ್ನು ತ್ಯಜಿಸುವಂತೆ ಒತ್ತಾಯಿಸುವವರೆಗೂ ಶ್ರೀ ಮಾತಾಜಿ ಹಲವಾರು ವರ್ಷಗಳ ಕಾಲ ವೈದ್ಯಕೀಯ ಅಧ್ಯಯನ ಮಾಡಿದರು. ಆಧ್ಯಾತ್ಮಿಕತೆ ಮತ್ತು ಆರೋಗ್ಯದ ನಡುವಿನ ಸಂಪರ್ಕವನ್ನು ಒಪ್ಪಿಕೊಂಡ ಸಮಗ್ರ ಸಂಪ್ರದಾಯದಿಂದ ಬಂದ ಅವರು ಧ್ಯಾನಕ್ಕೆ ಮತ್ತು ಮನಸ್ಸು ಮತ್ತು ದೇಹದ ಅಂದರೆ ಸೂಕ್ಷ್ಮ ಹಾಗೂ ಸ್ಥೂಲ ಶರೀರದ ಸಂಬಂಧದ ಮೇಲೆ ಧ್ಯಾನದ ಪ್ರಭಾವವನ್ನು ಗಮನಿಸಲು ತಮ್ಮ ಸಮಯವನ್ನು ಮೀಸಲಿಟ್ಟರು.
ಈ ಪ್ರಕ್ರಿಯೆಯಲ್ಲಿ, ಅವರು ಮಾನವ ದೇಹವನ್ನು ನಿಯಂತ್ರಿಸುವ ಸೂಕ್ಷ್ಮತೆಯ ಶಕ್ತಿಯುತ ವಾಹಿನಿಗಳ ಮತ್ತು ನರಜಾಲಗಳ ವ್ಯವಸ್ಥೆಯನ್ನು ಮರುಶೋಧಿಸಿದರು ಮಾತ್ರವಲ್ಲದೆ, ಈ ವ್ಯವಸ್ಥೆಯ ಸೂಕ್ಷ್ಮತೆಯ ಕೀಲಿಯನ್ನು ಅರಿತುಕೊಂಡರು: ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಕುಂಡಲಿನಿ ಎಂದು ಉಲ್ಲೇಖಿಸಲಾದ ಪೋಷಕ ಸ್ತ್ರೀಶಕ್ತಿಯನ್ನು ಅದರ ವ್ಯವಸ್ಥೆ ಉದ್ದಿಪನ ಪಲಗಳ ಕುರಿತು ತಿಳುವಳಿಕೆ ಗಳಿಸಿದರು . ಶ್ರೀ ಮಾತಾಜಿ ಮಾನವ ನಡವಳಿಕೆ ಮತ್ತು ಈ ಶಕ್ತಿ ಮತ್ತು ಸೂಕ್ಷ್ಮ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳನ್ನು ಅಧ್ಯಯನ ಮಾಡಿದರು. ಅಸಮತೋಲಿತ ನಡವಳಿಕೆಯು ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ವಿಪರೀತಗಳಿಗೆ ಹೇಗೆ ಕಾರಣವಾಗಬಹುದು ಮತ್ತು ಅನಾರೋಗ್ಯಕ್ಕೆ ಹೇಗೆ ಪೂರಕವಾಗಬಹುದು ಎಂಬುದನ್ನು ಅವರು ಕಂಡು ಕೊಂಡರು
ಶ್ರೀ ಮಾತಾಜಿ ಅವರು ರೋಗನಿವಾರಕ ಪ್ರಯೋಜನಗಳನ್ನು ಹೊಂದಿದ್ದರೂ, ಸಹಜ ಯೋಗದ ಉದ್ದೇಶವು ರೋಗಗಳನ್ನು ಗುಣಪಡಿಸುವುದಲ್ಲ, ಬದಲಾಗಿ ಸ್ವಯಂ ಸಾಕ್ಷಾತ್ಕಾರದ ಮೂಲಕ ಜನರಲ್ಲಿ ಈ ಶಕ್ತಿ ಮತ್ತು ಜಾಗೃತಿಯನ್ನು ಜಾಗೃತಗೊಳಿಸುವುದಾಗಿದೆ ಎಂದು ಒತ್ತಿ ಹೇಳಿದರು.
ತಮ್ಮ ಸಮ್ಮೇಳನಗಳಲ್ಲಿ, ಶ್ರೀ ಮಾತಾಜಿ ಈ ಆಂತರಿಕ ಶಕ್ತಿಯ ವ್ಯವಸ್ಥೆಯನ್ನು ಒಂದು ಪರಿಕಲ್ಪನೆಯಾಗಿ ಮಂಡಿಸಿದರು, ಸಾರ್ವಜನಿಕರು ಅದನ್ನು ಕುರುಡಾಗಿ ಸ್ವೀಕರಿಸದೆ ಮುಕ್ತ ಮನಸ್ಸಿನಿಂದ ಪರೀಕ್ಷಿಸಲು ಮುಂದಾಗಿ ಪ್ರೋತ್ಸಾಹಿಸಿದರು. ಇದರ ಪರಿಣಾಮವಾಗಿ, ಸಹಜ ಯೋಗವನ್ನು ಅಭ್ಯಾಸ ಮಾಡುವವರ ವೈಯಕ್ತಿಕ ಆರೋಗ್ಯ ಸ್ಥಿತಿಗಳಲ್ಲಿ ಪ್ರಮುಖ ಸುಧಾರಣೆಗಳನ್ನು ಕಂಡ ವೈದ್ಯಕೀಯ ವಿಜ್ಞಾನಿಗಳು ಮತ್ತು ವೈದ್ಯರು ಮತ್ತು ವಿಜ್ಞಾನಿಗಳ ಸಂಖ್ಯೆ ಹೆಚ್ಚುತ್ತಿದೆ - ಇವೆಲ್ಲವೂ ಪ್ರಿ ರಿವ್ಯೂಡ್ ವೈದ್ಯಕೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.
ಸಿಡ್ನಿಯ ರಾಯಲ್ ಹಾಸ್ಪಿಟಲ್ ಫಾರ್ ವುಮೆನ್‌ನ ನ್ಯಾಚುರಲ್ ಥೆರಪಿಸ್ ಯೂನಿಟ್‌ನಲ್ಲಿ ಆಸ್ಟ್ರೇಲಿಯಾದ ಜನರಲ್ ಪ್ರಾಕ್ಟೀಷನರ್ ಮತ್ತು ರಿಸರ್ಚ್ ಫೆಲೋ ಆಗಿರುವ ಡಾ. ರಮೇಶ್ ಮನೋಚಾ, ಅಧಿಕ ರಕ್ತದೊತ್ತಡ, ಋತುಬಂಧಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು[1], ಒತ್ತಡ-ಸಂಬಂಧಿತ ಲಕ್ಷಣಗಳು[2], ಎಡಿಎಚ್‌ಡಿ[3] ಮತ್ತು ಆಸ್ತಮಾ[4] ಸೇರಿದಂತೆ ಅಸ್ವಸ್ಥತೆಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯಲ್ಲಿ ಸಹಜ ಯೋಗ ಧ್ಯಾನದ ಪರಿಣಾಮಗಳ ಕುರಿತು ಮನವರಿಕೆಯಾಗುವ ಫಲಿತಾಂಶಗಳನ್ನು ವರದಿ ಮಾಡಿದ್ದಾರೆ. ಸಹಜ ಯೋಗ ಧ್ಯಾನದ ಸಮಯದಲ್ಲಿ ಸ್ಥಾಪಿಸಲಾದ ಮಾನಸಿಕ ಮೌನವು ಡಾ. ಮನೋಚಾ ಅವರ ಪ್ರಕಾರ "ಶಾರೀರಿಕ ಚಟುವಟಿಕೆಯ ವಿಶಿಷ್ಟ ಮಾದರಿಯೊಂದಿಗೆ ಸಂಬಂಧಿಸಿದೆ."
ಬಹು ಧ್ಯಾನ ವಿಧಾನಗಳು ಮತ್ತು ವಿಶ್ರಾಂತಿ ತಂತ್ರಗಳಲ್ಲಿ, ಸಹಜ ಯೋಗ ಧ್ಯಾನ ಮಾತ್ರ ಚಿಕಿತ್ಸಕ ಪರಿಣಾಮಗಳ ವಿಷಯದಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಅವರು ನಿರ್ದಿಷ್ಟಪಡಿಸುತ್ತಾರೆ.

೧೯೯೬ ರಲ್ಲಿ, ಶ್ರೀ ಮಾತಾಜಿ ಭಾರತದ ಮುಂಬೈ ಬಳಿಯ ಬೇಲಾಪುರದಲ್ಲಿ ಅಂತರರಾಷ್ಟ್ರೀಯ ಸಹಜ ಯೋಗ ಸಂಶೋಧನೆ ಮತ್ತು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದರು. ಈ ಚಿಕಿತ್ಸಾಲಯವು ಸಾಂಪ್ರದಾಯಿಕ ಆಯುರ್ವೇದ ಮತ್ತು ಅಲೋಪತಿ ವೈದ್ಯಕೀಯ ಆರೈಕೆಯ ಜೊತೆಗೆ ಸಹಜ ಯೋಗ ತಂತ್ರಗಳೊಂದಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುವ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ರೋಗಿಗಳಿಗೆ ಸೇವೆ ಸಲ್ಲಿಸುವುದನ್ನು ಮುಂದುವರೆಸಿದೆ. ಆರೋಗ್ಯ ಕೇಂದ್ರದಲ್ಲಿ ಧ್ಯಾನ ಚಿಕಿತ್ಸೆಯು ಸಾಂಪ್ರದಾಯಿಕ ಪಾಶ್ಚಿಮಾತ್ಯ ಔಷಧಕ್ಕೆ ಹೋಲಿಸಿದರೆ ಜೀವನದ ಗುಣಮಟ್ಟ, ಆತಂಕ ನಿವಾರಣೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಗಮನಾರ್ಹ ಸುಧಾರಣೆಗಳೊಂದಿಗೆ ಸಂಬಂಧಿಸಿದೆ ಎಂದು ಸಾಭೀತಾಗಿದೆ [5]
ಶ್ರೀ ಮಾತಾಜಿ ಮಾನವನ ಸೂಕ್ಷ್ಮ ವ್ಯವಸ್ಥೆಯನ್ನು ತಲೆಕೆಳಗಾದ ಮರ ಎಂದು ಬಣ್ಣಿಸಿದ್ದಾರೆ, ಇದು ಮೆದುಳಿನಲ್ಲಿ ಬೇರುಗಳನ್ನು ಮತ್ತು ದೇಹದಲ್ಲಿ ಕೊಂಬೆಗಳು ರೆಂಬೆ ಎಲೆ ಕಾಯಿ ಮತ್ತು ಹಣ್ಣುಗಳನ್ನು ಹೊಂದಿದೆ. ದೇಹದಲ್ಲಿರುವ ಶಕ್ತಿ ವ್ಯವಸ್ಥೆಯ ಬೇರುಗಳು ಮೆದುಳಿನಲ್ಲಿದ್ದು, ಮರದ ಕೊಂಬೆಗಳನ್ನು ಪೋಷಿಸಲು ಕಾಸ್ಮಿಕ್ ಪರಮ ಚೇತನದ ಆಧ್ಯಾತ್ಮಿಕ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಧ್ಯಾನದ ಸಮಯದಲ್ಲಿ ಮೆದುಳಿನಲ್ಲಿರುವ ಸೂಕ್ಷ್ಮ ವ್ಯವಸ್ಥೆ ಮತ್ತು ದೇಹದಲ್ಲಿರುವ ಶಕ್ತಿ ಕೇಂದ್ರಗಳ ನಡುವಿನ ಈ ನಿರಂತರ ಪ್ರತಿಕ್ರಿಯೆ ಪ್ರಕ್ರಿಯೆಗಳು ದೇಹ ಮತ್ತು ಮನಸ್ಸಿನ ಪ್ರಗತಿಶೀಲ ಸಮತೋಲನ ಏಕೀಕರಣದಲ್ಲಿ ಹಾಗೂ ಸಾಮರಸ್ಯ ಕಾಪಾಡುವಲ್ಲಿ ಅಂತ್ಯಗೊಳ್ಳುತ್ತವೆ. ಈ ಮರವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು, ನಾವು ಮೆದುಳಿನಲ್ಲಿರುವ ಬೇರುಗಳ ಕಡೆಗೆ ನಮ್ಮ ಗಮನವನ್ನು ಹರಿಸಬೇಕು ಮತ್ತು ಇದನ್ನು ಸಹಜ ಯೋಗ ಧ್ಯಾನ ಅಭ್ಯಾಸದ ಮೂಲಕ ಇದನ್ನು ಸಾಧಿಸಬಹುದು.