ಜಗತ್ತಿನ ಒಂದು ನಗರ ಸಭೆ

ಜಗತ್ತಿನ ಒಂದು ನಗರ ಸಭೆ

ಹೃದಯಗಳು ಭೇಟಿಯಾಗುವ ಸ್ಥಳ

قاعة كاكستون هول في لندن
ಕ್ಯಾಕ್ಸ್ಟನ್ ಹಾಲ್, ಲಂಡನ್

ಕ್ಯಾಕ್ಸ್ಟನ್ ಹಾಲ್ ಲಂಡನ್ನಿನ ಮಧ್ಯಭಾಗದಲ್ಲಿರುವ ವೆಸ್ಟ್ ಮಿನಿಸ್ಟರ್ ನಗರದಲ್ಲಿದೆ. ಇದನ್ನು 19 ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲಾಯಿತು ಮತ್ತು ಇಂಗ್ಲೆಂಡ್‌ನಲ್ಲಿ ಪ್ರಥಮ ಮುದ್ರಣಾ ಲಯವನ್ನು ಸ್ಥಾಪಿಸಿದ ವಿಲಿಯಂ ಕ್ಯಾಕ್ಸ್ಟನ್ ಅವರ ಗೌರವಾರ್ಥವಾಗಿ ಈ ಸಭಾಂಗಣವನ್ನು ಹೆಸರಿಸಲಾಯಿತು, ಇದು ಜ್ಞಾನದ ಪ್ರವೇಶವನ್ನು ಕ್ರಾಂತಿಗೊಳಿಸಿದ ನಾವೀನ್ಯತೆಯಾಗಿದೆ. ದಿಟ್ಟ ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಅನ್ವೇಷಿಸುವ ಸ್ಥಳವಾಗಿ ಇದು ದೀರ್ಘ ಇತಿಹಾಸವನ್ನು ಹೊಂದಿದೆ.

ಮೂಲತಃ ಕ್ಯಾಕ್ಸ್ಟನ್ ಹಾಲ್ ಸರ್ಕಾರಿ ಕಟ್ಟಡವಾಗಿತ್ತು ಇದು ಒಂದು ಟೌನ್ ಹಾಲ್. ಆದಾಗ್ಯೂ, ಇದು ವರ್ಷಗಳಲ್ಲಿ ದ್ವಿಪಾತ್ರವನ್ನು ಹೊಂದಿದೆ. ಗದ್ದಲದ ಸಭೆಗಳು, ಸಮಾರಂಭಗಳು ರಾಜಕೀಯ ಚಟುವಟಿಕೆಗಳು ಅರ್ಜಿಗಳು ಮತ್ತು ಸಾಮಾಜಿಕ ಸುಧಾರಣೆ ಜೊತೆ ಜೊತೆಗೆ ಹಲವು ಸೆಲೆಬ್ರಿಟಿ ವಿವಾಹಗಳು ಇಲ್ಲಿ ನಡೆದಿವೆ. ಕ್ಯಾಕ್ಸ್ಟನ್ ಹಾಲ್‌ನ ಬಾಗಿಲುಗಳಿಂದಲೇ 20 ನೇ ಶತಮಾನದ ಅನೇಕ ಉತ್ತಮ ವಿಚಾರಗಳು ಮತ್ತು ಚಳುವಳಿಗಳು ಜಾಗತಿಕ ರಂಗಕ್ಕೆ ಹರಡಿದವು. ಮಹಿಳಾ ಮತದಾನದ ಹಕ್ಕು ಚಳುವಳಿ, ಸಮಾಜವಾದ ಮತ್ತು ಗುಲಾಮಗಿರಿಯ ನಂತರದ ಪರಿಣಾಮಗಳನ್ನು ಎದುರಿಸುವ ಮೊದಲ ಪ್ಯಾನ್-ಆಫ್ರಿಕನ್ ಸಮ್ಮೇಳನದ ಧ್ವನಿಗಳು ಇಲ್ಲಿಂದ ಪ್ರಾರಂಭವಾದ ಕೆಲವು ಉದಾಹರಣೆಗಳಾಗಿವೆ.

ಹಾಗಾಗಿ, 1977 ರಲ್ಲಿ ಶ್ರೀ ಮಾತಾಜಿ ನಿರ್ಮಲಾ ದೇವಿ ತಮ್ಮ ಸಂದೇಶವನ್ನು ಸಾರ್ವಜನಿಕ ರಂಗಕ್ಕೆ ಕೊಂಡೊಯ್ಯಲು ನಿರ್ಧರಿಸಿದಾಗ, ಅವರು ಆಯ್ಕೆ ಮಾಡಿಕೊಂಡ ಸಭಾಂಗಣ ಇದಾಗಿತ್ತು ಎಂಬುದು ಕುತೂಹಲಕಾರಿಯಾಗಿದೆ. 1977 ಮತ್ತು 1983 ರ ನಡುವೆ ಶ್ರೀ ಮಾತಾಜಿ ಇಲ್ಲಿ ಸುಮಾರು ನೂರು ಬಾರಿ ವೇದಿಕೆಯನ್ನು ಇಲ್ಲಿ ಅಲಂಕರಿಸಿದರು, ಇದು ವಿಶಾಲ ಸಾರ್ವಜನಿಕರನ್ನು ಆಕರ್ಷಿಸಿ ಗಮನಾರ್ಹ ಬದಲಾವಣೆಯನ್ನು ಗುರುತಿಸಿತು. ಅವರ ಮಾತುಗಳು ಎಲ್ಲ ಜನರಿಗಾಗಿ ಇತ್ತು ಇವರ ಆಹ್ವಾನವು ಎಲ್ಲರಿಗೂ ಮುಕ್ತವಾಗಿತ್ತು. ಪ್ರವೇಶ ಉಚಿತ ವಾಗಿತ್ತು.

1913 ರ ಬೇಸಿಗೆಯಲ್ಲಿ ಶ್ರೇಷ್ಠ ಬಂಗಾಳಿ ಕವಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಇಲ್ಲಿ ಯಶಸ್ವಿ ಉಪನ್ಯಾಸಗಳ ಸರಣಿ ನೀಡಿದ್ದರು. ಉಪನ್ಯಾಸಗಳು "ವಿಶ್ವದ ವ್ಯಕ್ತಿಯ ಸಂಬಂಧ", "ಆತ್ಮ ಪುಸ್ತಕ", "ಪ್ರೀತಿಯಲ್ಲಿ ಸಾಕ್ಷಾತ್ಕಾರ" ಮತ್ತು "ಆತ್ಮದ ಸಮಸ್ಯೆ" ಮುಂತಾದ ಶೀರ್ಷಿಕೆ ಇದ್ದವು. ಇವು ಸುಮಾರು ಎಪ್ಪತ್ತು ವರ್ಷಗಳ ನಂತರ ಶ್ರೀ ಮಾತಾಜಿ ಅವರು ನೇರವಾಗಿ ಸಂಬೋಧಿಸುತ್ತಿದ್ದಾರೆ. ತನ್ನ ಪೂರ್ವವರ್ತಿಯಂತೆ, ಅವರು ಪ್ರಾಚೀನ ಪೂರ್ವ ಜ್ಞಾನವನ್ನು ಪಾಶ್ಚಿಮಾತ್ಯ ವೀಕ್ಷಣೆಯೊಂದಿಗೆ ಹಂಚಿಕೊಂಡರು ಮತ್ತು ಅವರಿಗೆ ತಮ್ಮೊಳಗೆ ಒಂದು ಪ್ರಯಾಣಕ್ಕೆ ಹೋಗಲು ಬಯಸಿದರು

"ನಮ್ಮೊಳಗೆ ಸ್ಥಳ ಮತ್ತು ಸಮಯವು ಆಳ್ವಿಕೆ ನಡೆಸುವುದನ್ನು ನಿಲ್ಲಿಸುತ್ತದೆ ಮತ್ತು ವಿಕಾಸದ ಕೊಂಡಿಗಳು ಏಕತೆಯಲ್ಲಿ ವಿಲೀನಗೊಳ್ಳುತ್ತವೆ."

ರವೀಂದ್ರನಾಥ ತ್ಯಾಗೋರ್

Rabindranath Tagore
ರವೀಂದ್ರನಾಥ ಟ್ಯಾಗೋರ್

ಆದಾಗ್ಯೂ, ಶ್ರೀ ಮಾತಾಜಿಯವರ ವಿಷಯದಲ್ಲಿ, ಅವರ ಉಪನ್ಯಾಸಗಳ ಉದ್ದೇಶವು ಕೇವಲ ಹೊಸ ಕಲ್ಪನೆಯನ್ನು ಅನ್ವೇಷಿಸುವುದಲ್ಲ, ಬದಲಾಗಿ ಆ ಕಲ್ಪನೆಯನ್ನು ವಾಸ್ತವಿಕಗೊಳಿಸುವುದು. ಅವರ ಉಪನ್ಯಾಸಗಳು ಯಾವಾಗಲೂ ಹೆಚ್ಚುವರಿ ಬೋನಸ್‌ನೊಂದಿಗೆ ಬರುತ್ತಿದ್ದವು. ಸಂಜೆಯ ಕೊನೆಯಲ್ಲಿ, ಅವರು ಯಾವಾಗಲೂ ಜನರಿಗೆ ಆತ್ಮಸಾಕ್ಷಾತ್ಕಾರದ ಅನುಭವವನ್ನು ನೀಡುತ್ತಾರೆ. ಆಳವಾದ ಧ್ಯಾನದ ನಿಶ್ಚಲತೆಗೆ ಅವರಿಗೆ ಮಾರ್ಗದರ್ಶನ ನೀಡುತ್ತಾ, ಹೆಚ್ಚಿನದನ್ನು ಆದ ಆಳವನ್ನು ಅನುಭವಿಸುವ ಅವಕಾಶವನ್ನು ನೀಡಲಾಯಿತು. ಟ್ಯಾಗೋರ್ ಅವರ "ಬ್ರಹ್ಮದ ಸಾಕ್ಷಾತ್ಕಾರ", ಶ್ರೀ ಮಾತಾಜಿಯವರ "ನಿಜವಾದ ಆತ್ಮದ ಅನುಭವ"ವಾಯಿತು.

ಮತ್ತೊಮ್ಮೆ, ಕಾಕ್ಸ್ಟನ್ ಹಾಲ್ ನ  ಮೆಟ್ಟಿಲುಗಳಿಂದ ಕ್ರಾಂತಿಕಾರಿ ಚಳುವಳಿಯನ್ನು ಪ್ರಾರಂಭಿಸಲಾಯಿತು. ಆಧ್ಯಾತ್ಮಿಕ ಮಟ್ಟದಲ್ಲಿ ಏರಲು ಮನುಷ್ಯನ ಸಾಮರ್ಥ್ಯದ ಮೂಲಭೂತ ಹೆಜ್ಜೆಯನ್ನು ತೆಗೆದುಕೊಳ್ಳಲಾಯಿತು ಮತ್ತು ಅನೇಕರು ತಮ್ಮಲ್ಲಿ ಆಳವಾದ ಬದಲಾವಣೆಯನ್ನು ಮತ್ತು ಅವರ ವಿಶ್ವ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಅನುಭವಿಸಿದರು.

ಆರು ವರ್ಷಗಳ ಕಾಲ ಶ್ರೀ ಮಾತಾಜಿ ಕ್ಯಾಕ್ಸ್ಟನ್ ಹಾಲ್‌ನಲ್ಲಿ ಎಲ್ಲಾ ವರ್ಗದ ಜನರೊಂದಿಗೆ ಮಾತನಾಡಿದರು. ಅವರ ಎಲ್ಲಾ ಕಾಳಜಿಗಳಿಗೆ ಅವರು ಸಮಯ ತೆಗೆದುಕೊಂಡರು. ಅವರು ಆ ದೊಡ್ಡ ಪ್ರಶ್ನೆಗಳನ್ನು ಎತ್ತಿದರು; "ನಾವು ಇಲ್ಲಿ ಏಕೆ ಇದ್ದೇವೆ?", "ನನ್ನ ಜೀವನದ ಉದ್ದೇಶವೇನು?", "ದೇವರು ನಮ್ಮನ್ನು ಏಕೆ ಸೃಷ್ಟಿಸಿದನು?", "ದೇವರು ಇದ್ದಾನೆಯೇ?". ಕೊನೆಯಲ್ಲಿ ಎಲ್ಲರೂ ತಮ್ಮ ನಿಜವಾದ ಆತ್ಮಗಳೊಂದಿಗೆ ಸಂಪರ್ಕ ಸಾಧಿಸಲು ಆಹ್ವಾನಿಸಲಾಯಿತು.

ಹೀಗೆ ಪಶ್ಚಿಮದಲ್ಲಿ ಶ್ರೀ ಮಾತಾಜಿಯವರ ಸಾರ್ವಜನಿಕ ಸೇವೆಯು ನಿಜವಾಗಿಯೂ ಪ್ರಾರಂಭವಾಯಿತು. ಇಲ್ಲಿ ಕಾಕ್ಸ್ಟನ್ ಹಾಲ್‌ನಲ್ಲಿ, ಎಲ್ಲರಿಗೂ ಸ್ವಾಗತ, ಮತ್ತು ಬೆಲೆಕಟ್ಟಲಾಗದಂತಹ (ಆತ್ಮ ಸಾಕ್ಷತ್ಕಾರವನ್ನು )ಉಚಿತವಾಗಿ ನೀಡಲಾಯಿತು. ಅವರ ಆತ್ಮಸಾಕ್ಷಾತ್ಕಾರವನ್ನು ಪಡೆದ ಅನೇಕರು ಅವರ ಪಕ್ಕದಲ್ಲಿಯೇ ಉಳಿದರು ಮತ್ತು ಸತ್ಯವನ್ನು ಹುಡುಕುತ್ತಿರುವ ಸಾಧ್ಯವಾದಷ್ಟು ಜನರನ್ನು ತಲುಪುವಲ್ಲಿ ಅವರ ಪ್ರಯತ್ನಗಳನ್ನು ಬೆಂಬಲಿಸಿದರು.

೧೯೮೦ ರಲ್ಲಿ ಶ್ರೀ ಮಾತಾಜಿ ಅವರು ಹೀಗೆ ಹೇಳಿದರು, “(ಸತ್ಯಕ್ಕಾಗಿ) ಹುಡುಕಾಟ ನಡೆಯುತ್ತಿದೆ ಮತ್ತು ಅನೇಕ ಅಂಗಡಿಗಳು ತೆರೆದಿವೆ (ಸತ್ಯವನ್ನು) ಭರವಸೆ ನೀಡುವ ಜನರು). ಇದು ಅಂಗಡಿಯಲ್ಲ. ಇದು ದೇವಾಲಯ, ಮತ್ತು ಮಾರುಕಟ್ಟೆಯಲ್ಲಿರುವ ದೇವಾಲಯವು ಬಹಳ ಕಡಿಮೆ ಮೌಲ್ಯವನ್ನು ಹೊಂದಿದೆ. ದೇವಾಲಯಕ್ಕೆ ನೀವು ಏಳು ಪರ್ವತಗಳನ್ನು ಹತ್ತಬೇಕಾದರೆ ಅದು ಹೆಚ್ಚು ಮೌಲ್ಯವನ್ನು ಹೊಂದಿದೆ. ಆದರೂ ಮಾತ್ರ ಅಲ್ಲಿಗೆ ಜೀವಂತವಾಗಿ ತಲುಪಬಹುದು. ಆದ್ದರಿಂದ, ಜನರೊಂದಿಗೆ ಮಾತನಾಡಲು ಲಂಡನ್‌ಗೆ, ಕ್ಯಾಕ್ಸ್ಟನ್ ಹಾಲ್‌ಗೆ ಬರಲಿದೆ".

ಶ್ರೀ ಮಾತಾಜಿ ತಮ್ಮ ಆತ್ಮಸಾಕ್ಷಾತ್ಕಾರದ ಉಡುಗೊರೆಯಿಂದ ಎಲ್ಲರನ್ನು ಸ್ವಾಗತಿಸಿದರು ಮತ್ತು ಒಪ್ಪಿಕೊಂಡರು.

ಎಲ್ಲಾ ಪರಿಮಿತಿಗಳನ್ನು ಸ್ವಾಗತಿಸುವುದು ಮತ್ತು ಅವುಗಳನ್ನು ಮೆಟ್ಟಿನಿಂತು ಸಾಗುವುದೇ ಪ್ರೀತಿಯ ಉನ್ನತ ಕಾರ್ಯ" ಎಂದು ಟ್ಯಾಗೋರ್ ಅವರ ಮಾತುಗಳಲ್ಲಿ ಹೇಳಲಾಗಿದೆ, ಮತ್ತು ಶ್ರೀ ಮಾತಾಜಿಯವರ ಪ್ರೀತಿ ಮತ್ತು ಪ್ರೀತಿಯ ಉಡುಗೊರೆ ಹೃದಯ ಮತ್ತು ಜಗತ್ತನ್ನು ಬೆಳಗಿಸಲು ಎಲ್ಲಾ ಅಡೆತಡೆಗಳನ್ನು ಮೀರಿದೆ.

“ಸತ್ಯವೆಂದರೆ ಅದೇ ಆಗಿದೆ. ನಾವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಅದನ್ನು ಪರಿವರ್ತಿಸಲು ಸಾಧ್ಯವಿಲ್ಲ. ನಾವು ಅದನ್ನು ಮಾಡಲು ಸಾಧ್ಯವಿಲ್ಲ.”

شری ماتاجی، بث، انگلستان، ۱۹۷۷
೧೯೭೭ ರಲ್ಲಿ ಇಂಗ್ಲೆಂಡ್‌ನ ಬಾತ್‌ನಲ್ಲಿ ಶ್ರೀ ಮಾತಾಜಿ